ಕಲಬುರಗಿ: -ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ ತಾಜ್ಸುಲ್ತಾನ್ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೈಯದ್ ಚಿಂಚೋಳಿ ಕೆರೆಯಲ್ಲಿ ಹೂಳೆತ್ತುವ ಸ್ಥಳದಲ್ಲಿ ಗುರುವಾರ ನರೇಗಾ ಕೂಲಿಕಾರರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.
ತಾಜ್ಸುಲ್ತಾನಪುರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನುಪಮಾ ನೇತೃತ್ವದಲ್ಲಿ ಶಿಬಿರ ಹಮ್ಮಿಕೊಂಡಿದ್ದು, ಗ್ರಾಮ ಪಂಚಾಯಿತಿಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿನ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಸ್ಥಳದಲ್ಲಿನ ೩೫೦ ಮಹಿಳೆಯರು ಹಾಗೂ ೧೬೧ ಪುರುಷರು ಸೇರಿ ೫೧೧ ಕರ‍್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.
ರಕ್ತದ ಒತ್ತಡ, ಶುಗರ್, ರಕ್ತ ಪರೀಕ್ಷೆ, ಕಣ್ಣಿನ ಪರೀಕ್ಷೆ ಹಲ್ಲು ಪರೀಕ್ಷೆ ಇನ್ನು ಮುಂತಾದ ಪರೀಕ್ಷೆಗಳನ್ನು ಸ್ಥಳದಲ್ಲಿ ಮಾಡಲಾಯಿತು. ರಾಜೀವಗಾಂಧಿ ಪಂಚಾಯತ್ರಾಜ್ ೆಲೋ ರೀಟಾ, ತಾಲೂಕು ಪಂಚಾಯಿತಿ ಐಈಸಿ ಸಂಯೋಜಕ ಮೋಸಿನ ಖಾನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನುಪಮಾ, ಸಿಬ್ಬಂದಿ ಪ್ರೇಮಕುಮಾರ, ವಿಜಯಲ$್ಮ ಇತರರಿದ್ದರು.