ಕೊಳ್ಳೇಗಾಲ: ಮಾಜಿ ಶಾಸಕ ಆರ್.ನರೇಂದ್ರ ಅವರ ಮೇಲೆ ಹನೂರು ಶಾಸಕ ಎಂ.ಆರ್.ಮಂಜುನಾಥ್ ಹಾಗೂ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್.ದತ್ತೇಶ್ ಕುಮಾರ್ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್.ನರೇಂದ್ರ ಅವರು ಸಹಕಾರ ಸಂಘದ ಚುನಾವಣೆಯಲ್ಲಿ ಮತದಾನ ಮಾಡಿಸದೆ ಅವಿರೋಧ ಆಯ್ಕೆಗಳನ್ನು ಮಾಡಿ ಸರ್ವಾಧಿಕಾರ ಮಾಡುತ್ತಿದ್ದು, ಸಾಲಗಾರಲ್ಲದ ಕ್ಷೇತ್ರದಲ್ಲಿ ತಮಗೆ ನಿಷ್ಠೆಯಿಂದ ಇರುವವರನ್ನು ಇಟ್ಟು ಕೊಂಡು ಬೇಡವಾದವರನ್ನು ಸದಸ್ಯತ್ವದಿಂದ ತೆಗೆದು ಹಾಕಿಸಿದ್ದಾರೆ ಎಂದು ಶಾಸಕ ಎಂ.ಆರ್.ಮಂಜುನಾಥ್ ಹಾಗೂ ದತ್ತೇಶ್ ಕುಮಾರ್ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರ್.ನರೇಂದ್ರ ಅವರು ಸುಮಾರು 20 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಯಾವುದೇ ಸಂದರ್ಭದಲ್ಲೂ ಇಲ್ಲಿ ರಾಜಕೀಯ ಮಾಡಿಲ್ಲ. ಅದಕ್ಕೆ ಸ್ಪಷ್ಟ ಉದಾಹರಣೆ ಕೊಳ್ಳೇಗಾಲದ ಕಸಬಾ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಹೆಚ್ಚು ಪ್ರತಿನಿಧಿಗಳಿದ್ದರು. ಬಿಜೆಪಿ ಬೆಂಬಲಿತರಾದ ಮಧುವನಹಳ್ಳಿಯ ಎಸ್ ರಮೇಶ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದೇ ಸಾಕ್ಷಿ.
ನರೇಂದ್ರ ಅವರು ಮೈಸೂರು ಮತ್ತು ಚಾಮರಾಜನಗರದ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಚಾಮರಾಜನಗರ ಜಿಲ್ಲೆಯ ಸಹಕಾರಿ ಸಂಘಗಳಿಗೆ ಪಕ್ಷಬೇಧ ಮರೆತು ಸುಮಾರು 400 ಕೋಟಿ ರೂ. ಗಳ ಬೆಳೆ ಸಾಲ ಕೊಡಿಸಿರುತ್ತಾರೆ. ಸಹಕಾರಿ ಸಂಘಗಳ ಕಾಯ್ದೆಯ ಪ್ರಕಾರ ಕಾಲಕಾಲಕ್ಕೆ ಪರಿಷ್ಕೃತವಾಗುವ ಸದಸ್ಯತ್ವದ ಶುಲ್ಕ ಬಾಕಿ ಉಳಿಸಿ ಕೊಂಡವರಿಗೆ ಹಾಗೂ ಸಾಲದ ಮೇಲೆ ಸುಸ್ತಿ ಆದವ ರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತ ಚಲಾಯಿಸಲು ಅವಕಾಶವಿರುವುದಿಲ್ಲ. ಈ ಪ್ರಕ್ರಿ ಯೆಯಲ್ಲಿ ಯಾರ ಹಸ್ತ ಕ್ಷೇಪವೂ ಇರುವುದಿಲ್ಲ. ನಮ್ಮ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 900ಕ್ಕೂ ಹೆಚ್ಚು ಸಾಲ ರಹಿತ ಸದಸ್ಯರಿದ್ದಾಗ್ಯೂ ಕೇವಲ 390 ಸದಸ್ಯರು ಮಾತ್ರ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ. ಇದು ವಾಸ್ತವ ಸಂಗತಿಯಾಗಿದ್ದು ವಿನಾಕಾರಣ ಮಾಜಿ ಶಾಸಕ ಆರ್.ನರೇಂದ್ರ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುವುದು ಶಾಸಕರ ಘನತೆಗೆ ತಕ್ಕದ್ದಲ್ಲ ಎಂದು
ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ರಮೇಶ್, ಉಪಾಧ್ಯಕ್ಷ ಎಂ.ಶೇಖರ್ ರವರು ನಿರ್ದೇಶಕರಾದ ಸಿ. ಬಸವರಾಜು, ರವಿ, ಸುರೇಶ್, ಪುಟ್ಟಸ್ವಾಮಿ, ಶೇಖರ್ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.