ಜಿಲ್ಲೆ

‘ನರಗುಂದ ಬಂಡಾಯ’ 12ರಂದು ತೆರೆಗೆ

ಹುಬ್ಬಳ್ಳಿ: ಉತ್ತರ ಕರ್ನಾಟಕದ ರೈತ ಹೋರಾಟ ಕಥೆ ಹೊಂದಿರುವ ‘ನರಗುಂದ ಬಂಡಾಯ’ ಚಿತ್ರ ಮಾ. 12ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಿರ್ವಪಕ ಸಿದ್ದೇಶ ವಿರಕ್ತಮಠ, ನರಗುಂದ ರೈತ ಹೋರಾಟಗಾರ ವೀರಪ್ಪ ಕಡ್ಲಿಕೊಪ್ಪ ಮತ್ತು ರೈತ ಬಸಪ್ಪ ಲಕ್ಕುಂಡಿ ಅವರ ಹೋರಾಟದ ಕಥೆ ಮತ್ತು ಮಲಪ್ರಭಾ ಆಣೆಕಟ್ಟಿನ ವಿಶೇಷತೆ ಈ ಚಿತ್ರದಲ್ಲಿ ಇದೆ ಎಂದರು.

ನಾಗೇಂದ್ರ ಮಾಗಡಿ ನಿರ್ದೇಶನದ ಈ ಚಿತ್ರದಲ್ಲಿ ನಾಯಕ ನಟನಾಗಿ ಗಟ್ಟಿಮೇಳ ಧಾರಾವಾಹಿಯ ನಟ ರಕ್ಷ (ವೇದಾಂತ್), ನಾಯಕಿಯಾಗಿ ಶುಭಾ ಪೂಂಜಾ, ಸಾಧು ಕೋಕಿಲ, ಅವಿನಾಶ, ಭವ್ಯಾ, ನೀನಾಸಂ ಅಶ್ವತ್ಥ, ಸಂಗೀತಾ, ಶಿವಕುಮಾರ, ರವಿಚೇತನ, ಸುರೇಶ ರಾಜ, ಜಗದೀಶ ರಿತ್ತಿ ಸೇರಿ ಉತ್ತರ ಕರ್ನಾಟಕದ ಕಲಾವಿದರು ನಟಿಸಿದ್ದಾರೆ. ಉತ್ತರ ಕರ್ನಾಟಕದ ವಿವಿಧೆಡೆ ಚಿತ್ರೀಕರಣ ನಡೆಸಲಾಗಿದೆ ಎಂದು ತಿಳಿಸಿದರು.

ನಾಯಕ ನಟ ರಕ್ಷ, ನಾಯಕಿ ಶುಭಾ ಪೂಂಜಾ ಮತ್ತಿತರರಿದ್ದರು.