ಬಾಗಲಕೋಟೆ: ಹಿಂದು ಸಂಘಟನೆ ಕಾರ್ಯಕರ್ತರನ್ನು ಉದ್ಧೇಶಪೂರ್ವಕವಾಗಿ ಹತ್ತಿಕ್ಕುವ ಪ್ರಯತ್ನ ಮಾಡಿದರೆ ಅದರ ವಿರುದ್ಧ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ. ಸೇಡಿನ ಕ್ರಮ ಕೈಬಿಡಿ ಇಲ್ಲವಾದರೆ ನಮ್ಮದು ಸಹ ದೂಧ್ ಕಾ ದೂಧ್ ಪಾನೀ ಕಾ ಪಾನೀ. ಒಮ್ಮೆ ಆಗಿಯೇ ಹೋಗಲಿ ಎಂದು ಹಿಂದು ಜಾಗರಣ ವೇದಿಕೆ ಮುಖಂಡ ಜಗದೀಶ್ ಕಾರಂತ ಜಿಲ್ಲೆಯ ಪೊಲೀಸರಿಗೆ ಎಚ್ಚರಿಸಿದ್ದಾರೆ.
ಮೇ ೮ ರಂದು ಬಾಗಲಕೋಟೆಯಲ್ಲಿ ನಡೆದಿದ್ದ ಲಘು ಲಾಠಿ ಪ್ರಹಾರ, ಹಿಂದು ಕಾರ್ಯಕರ್ತರ ಮೇಲೆ ಎ-ï ಐಆರ್ ಪ್ರಕರಣವನ್ನು ಖಂಡಿಸಿ, ಶನಿವಾರ ಬಾಗಲಕೋಟೆಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಂದು ಪ್ರತಿಭಟನೆ ಮಾಡುತ್ತಿದ್ದ ಹಿಂದು ಸಂಘಟನೆ ಕಾರ್ಯಕರ್ತರ ವಿರುದ್ಧ ಉದ್ದೇಶಪೂರ್ವಕವಾಗಿ ದೌರ್ಜನ್ಯ ನಡೆಸಲಾಗಿದೆ. ನಿಮ್ಮ ಲಾಠಿಗಳಿಗೆ ಹೆದರಿ ನಾವು ಹಿಂದಕ್ಕೆ ಸರಿಯಲ್ಲ. ಹಿಂದು ಸಮಾಜ ಬೇಲಿ ಇಲ್ಲದ ಹೊಲವಲ್ಲ. ಸಮಾಜದ ಸುರಕ್ಷತೆಗೆ ಕೈಹಾಕಿದ್ದೇವೆ. ಇದಕ್ಕಾಗಿ ಯಾವ ಬೆಲೆ ತೆರಲು ಸಿದ್ದ ಎಂದು ಘೋಷಿಸಿದರು.
ಖಾಕಿಗೆ ನಾವು ಗೌರವ ಕೊಡುತ್ತೇವೆ. ಹಾಗೆಂದು ಇದು ನಮ್ಮ ದೌರ್ಬಲ್ಯವಲ್ಲ. ಬಾಗಲಕೋಟೆಯಲ್ಲಿ ಎಂಜಿಜಿ ಎನ್ನುವ ಗುಂಡಾಗಿರಿ ಗುಂಪು ತಲೆ ಎತ್ತಿದೆ. ಅದರ ವಿರುದ್ಧ ಕ್ರಮ ತೆಗೆದುಕೊಳ್ಳಿ. ಮೇ ೮ ರಂದು ನಡೆದ ಪ್ರಕರಣದಲ್ಲಿ ಸಿಪಿಐ ಹಾಗೂ ಪಿಎಸ್ ಐ ನಮ್ಮ ಕಾರ್ಯಕರ್ತರನ್ನು ನಿಂದಿಸಿ ಯಾರದ್ದೋ ಕೈಗೊಂಬೆಯಂತೆ ನಡೆದುಕೊಂಡಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಿದ್ದ ಎಸ್ಪಿ ಅವರು ಸಹ ಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ ಪೊಲೀಸ್ ಅಽಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಾವು ರಾಜ್ಯಪಾಲರಿಗೆ ದೂರು ಕೊಡುತ್ತಿದ್ದೇವೆ ಎಂದು ತಿಳಿಸಿದರು.