ಯಾದಗಿರಿ: ಜಿಲ್ಲೆಯ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಕಚೇರಿ ರಾಜ್ಯಧ್ಯಕ್ಷರಾದ ಎಂ. ಬಸವರಾಜ ಪಡುಕೋಟೆಯವರು ಉದ್ಘಾಟಿಸಿದರು.
ರಾಜ್ಯಾಧ್ಯಂತ ನಾಡು,ನುಡಿ,ನೆಲ ಜಲದ ರಕ್ಷಣೆಗಾಗಿ ಯಾವ ಸಮಯದಲ್ಲಿಯಾದರು ಹೋರಾಟಕ್ಕೆ ಮುಂಚುಣಿಯಲ್ಲಿ ನಿಂತು ಸಂಘಟನೆ ಕೆಲಸ ಮಾಡುತ್ತದೆಂದು ಹೇಳಿದರು. ನನ್ನ ತವರು ಜಿಲ್ಲೆಯಲ್ಲಿ ನಮ್ಮ ಸಂಘಟನೆಯ ಕಚೇರಿ ಅದ್ದೂರಿಯಾಗಿ ತೆರದುಕೊಂಡಿದ್ದು ನನಗೆ ಬಹಳ ಸಂತೋಷವಾಗಿದೆ ಜಿಲ್ಲೆಯಲ್ಲಿ ಸಂಘಟನೆಯು ಬಲಿಷ್ಠವಾಗಿ ಬೆಳೆಯುತ್ತದೆ ಜಿಲ್ಲಾಧ್ಯಕ್ಷರಾದ ರಂಗಯ್ಯ ಮುಸ್ತಾಜೀರ ಇವರ ಮೇಲೆ ವಿಶ್ವಾಸವಿದೆ ಅವರು ಹತ್ತಾರು ವರ್ಷಗಳಿಂದ ಸಮಾಜ ಪರ ಹೋರಾಟ ಮಾಡುತ್ತ ನಾಡು ನುಡಿ ರಕ್ಷಣೆಯಲ್ಲಿ ಕೆಲಸಮಾಡಿದ್ದಾರೆ ಯಾದಗಿರಿ ಇತಿಹಾಸದಲ್ಲಿಯೇ ಮೊದಲ ಭಾರಿಗೆ ಅವರು ತವರೂರಾದ ತುಮಕೂರಿನಲ್ಲಿ ನಾಡದೇವತೆ ಭುವನೇಶ್ವರಿಯ ವೃತ್ತವನ್ನು ಸ್ಥಾಪಿಸಿದ್ದಾರೆ ಎಂದು ಹೇಳಿದರು.
ಇದರಿಂದ ಅವರ ಕನ್ನಡ ಅಭಿಮಾನ ಎಂತಹದ್ದು ಎಂದು ತಿಳಿದು ಬರುತ್ತದೆ ಎಂದು ಹೇಳಿದರು. ಜಿಲ್ಲಾಧ್ಯಕ್ಷ ರಂಗಯ್ಯ ಮುಸ್ತಾಜೀರ್ ಮಾತಾನ್ನಾಡಿ ಯಾದಗಿರಿಯಲ್ಲಿ ಸೇನೆಯ ಜವಬ್ದಾರಿ ನನ್ನ ಮೇಲೆ ಇದೆ ಎಲ್ಲಾ ತಾಲ್ಲೂಕ ಅಧ್ಯಕ್ಷರುಗಳ ತಮ್ಮ ತಮ್ಮ ತಾಲೂಕಿನಲ್ಲಿ ತಾಯಿ ಕನ್ನಡಮಾತೆಯ ಸೇವೆಮಾಡುವ ಯುವಕರನ್ನು ಗುರುತಿಸಿ ಸಂಘಟನೆಯಲ್ಲಿ ಪಾಲುಗೊಳ್ಳಲು ಕೆಲಸಮಾಡಬೇಕೆಂದು ತಿಳಿಸಿದರು.