ಜಿಲ್ಲೆ

ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಿ

ಚನ್ನಬಸಯ್ಯ ಗುರುವಿನ

ದೋರನಹಳ್ಳಿ: ನಾವು ಇರುವ ಪ್ರದೇಶವನ್ನು ಪ್ರತಿಯೊಬ್ಬರೂ ಶುಚಿತ್ವವಾಗಿಟ್ಟುಕೊಳ್ಳಬೇಕು ಎಂದು ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಪ್ರಕಾಶ ಕುಚನೂರ ಹೇಳಿದರು.

ಕೃಷಿ ಮಹಾವಿದ್ಯಾಲಯ ಮತ್ತು ರಾಷ್ಟಿçÃಯ ಸೇವಾ ಯೋಜನೆಯಿಂದ ಬುಧವಾರ ಹಮ್ಮಿಕೊಂಡ ಸ್ವಚ್ಛತಾ ಹೀ ಸೇವಾ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ನಮಗೆ ಬರುವ ಬಹುತೇಕ ಮಾರಕ ರೋಗಗಳಿಂದ ದೂರ ಇರಬಹುದು ಎಂದರು.

ಆರೋಗ್ಯ ಎಂಬುದು ಮನುಷ್ಯನಿಗೆ ಬೆಲೆ ಕಟ್ಟಲಾಗದ ಭಾಗ್ಯ. ಹೀಗಾಗಿ ನಾವು ಆರೋಗ್ಯವಾಗಿದ್ದರೆ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬರೂ ಸ್ವಚ್ಛತೆ ಎಂಬುದು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಹಿರಿಯ ಪ್ರಾಧ್ಯಾಪಕ ಡಾ.ಜಿ.ಸಿ.ಶೇಖರ, ಡಾ.ಕುಮಾರಸ್ವಾಮಿ ಮಾತನಾಡಿದರು. ಡಾ.ಗಾಣಿಗೇರ, ಡಾ.ರಾಜಾ ಚವ್ಹಾಣ್, ಡಾ.ಸಂಗೀತಾ ಗಾಯಕವಾಡ, ಇತರರಿದ್ದರು. ಎನ್‌ಎಸ್‌ಎಸ್ ಅಧಿಕಾರಿ ಡಾ.ಶರಣಭೂಪಾಲರಡ್ಡಿ, ರವಿ ಪೂಜಾರಿ ಕರ‍್ಯಕ್ರಮ ನಡೆಸಿಕೊಟ್ಟರು. ಗಾಂಧಿ ಜಯಂತಿ ನಿಮಿತ್ತ ಭೀಮರಾಯನಗುಡಿಯಲ್ಲಿ ಜಾಥಾ ಆಯೋಜಿಸಲಾಯಿತು.