ಇಟಗಿ: ನಮ್ಮ ವಿದ್ಯಾರ್ಥಿಗಳು ಶಿಣ, ರಾಜಕೀಯ, ವಿವಿಧ ಸಂಟನೆ, ಪತ್ರಿಕಾ ರಂಗ ಸೇರಿ ಬೇರೆ ೇತ್ರಗಳಲ್ಲಿ ತೊಡಗಿಸಿಕೊಂಡು ಕಾರ್ಯನಿರ್ವಹಿಸಿದರೆ ಗುರುಗಳಿಗೆ ಹೆಮ್ಮೆ ಎಂದು ನಿವೃತ್ತ ಸಹಶಿಕ ಕೆ.ಬಿ.ನಾವಲಗಟ್ಟಿ ಹೇಳಿದರು.
ಗ್ರಾಮದ ಚನ್ನಮ್ಮ ರಾಣಿ ಸ್ಮಾರಕ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ 1993ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಂದ ಸೋಮವಾರ ಏರ್ಪಡಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು. ಜನತಾ ಶಿಣ ಪ್ರಸಾರ ಸಮಿತಿ ಅಧ್ಯ ವಿಜಯಕುಮಾರ ಸಾಣಿಕೊಪ್ಪ ಅಧ್ಯತೆ ವಹಿಸಿದ್ದರು. ಸಂಸ್ಥೆಯ ಉಪಾಧ್ಯ ಬಸವಂತಪ್ಪ ಬೆಣಚಮರಡಿ ಉದ್ಘಾಟಿಸಿದರು. ನಿವೃತ್ತ ಗುರುಗಳಾದ ಸಿ.ಬಿ.ಲಂಗೋಟಿ, ಸಿ.ಆರ್.ಪಾಟೀಲ, ಕೆ.ಎಸ್.ಕುರಗುಂದ, ಎಂ.ಎಸ್.ಪೂಜಾರ, ಗುರುಗಳಾದ ಎಸ್.ಎಂ.ತುರಮರಿ, ಬಿ.ಬಿ.ಕಾದ್ರೊಳ್ಳಿ, ವಿ.ವಿ.ಬಡಿಗೇರ, ಪ್ರಾಚಾರ್ಯ ಎಸ್.ಎಸ್.ಶಾಸ್ತ್ರಿ, ಕೀರ ಗೂರನವರ, ಎ.ಎಸ್.ಒಳಕೇರಿ, ಜನತಾ ಶಿಣ ಪ್ರಸಾರ ಸಮಿತಿ ಆಡಳಿತ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.