ಜಿಲ್ಲೆ

ನಮ್ಮ ಭಾಗದ ಪ್ರತಿಭೆಗಳು ಬೆಳೆಯಲಿ

ಕಲಬುರಗಿ: ಉತ್ತರ ಕರ್ನಾಟಕ ಭಾಗದ ಪ್ರತಿಭೆಗಳು ಅಂತಾರಾಷ್ಟಿçÃಯ ಮಟ್ಟದ ಚಲನಚಿತ್ರ ಹಾಗೂ ಕಿರುಚಿತ್ರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಕಲಬುರಗಿ ಜಿಲ್ಲೆಗೆ ಕೀರ್ತಿ ಹೆಚ್ಚಿಸಬೇಕು ಎಂದು ಮುಖಂಡ ಚೇತನ್ ಗೋನಾಯಕ್ ಹೇಳಿದರು.

ನಗರದ ರಂಗಾಯಣದಲ್ಲಿ ಮನೋಮಯ ಸ್ಟುಡಿಯೋಸ್‌ನಿಂದ ಭಾನುವಾರ ಏರ್ಪಡಿಸಿದ್ದ ಕಲಬುರಗಿ ಏಳನೇ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್‌ನಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಬೆಂಗಳೂರಿನAತಹ ಕಾರ್ಯಕ್ರಮ ಕಲಬುರಗಿಯಲ್ಲಿ ಆಯೋಜನೆ ಉತ್ತಮ ಬೆಳವಣಿಗೆ. ನಮ್ಮ ಭಾಗದ ಪ್ರತಿಭೆಗಳನ್ನು ಮನೋಮಯ ಸ್ಟುಡಿಯೋಸ್ ಮಾಡುತ್ತಿದೆ. ಇಲ್ಲಿನ ಪ್ರತಿಭೆಗಳು ಚಲನಚಿತ್ರ, ಕಿರುಚಿತ್ರ ಮಾಡಲಿ ಎಂದು ಶುಭ ಕೋರಿದರು.
ಪತ್ರಕರ್ತ ಬ್ರಹ್ಮಾನಂದ ಅರಳಿ ಮಾತನಾಡಿ, ಕಲಾವಿದರಿಂದ ಕಲಾವಿದರಿಗೆ ಸತ್ಕಾರ ಮಾಡುತ್ತಿರುವುದು ಸಂತಸ ತಂದಿದೆ. ನಿತ್ಯದ ಜೀವನದಲ್ಲಿ ಪತ್ರಕರ್ತರು ಸಹ ಬರವಣಿಗೆ ಮೂಲಕ ಅP್ಷÀರಗಳನ್ನು ಚಂದವಾಗಿ ಪೋಣಿಸುವುದು ಒಂದು ರೀತಿಯಲ್ಲಿ ಕಲಾವಿದರಂತೆ ಕಾರ್ಯನಿರ್ವಹಿಸುತ್ತೇವೆ. ಇಂದಿಲ್ಲಿ ಪತ್ರಕರ್ತರನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಖುಷಿ ಕೊಟ್ಟಿದೆ ಎಂದರು.
ಫಿಲA ಫೆಸ್ಟಿವಲ್ ಆಯೋಜಕ ವೈಭವ ಕೇಸ್ಕರ್ ಮಾತನಾಡಿ, ನಮ್ಮ ಭಾಗದಲ್ಲಿ ರೌಡಿಸಂ, ಪ್ರೀತಿ-ಪ್ರೇಮ, ಮರ ಸುತ್ತುವ ಕಥೆಗಳ ಸುತ್ತ ಗಿರಕಿ ಹೊಡೆಯಲಾಗುತ್ತಿತ್ತು. ಶಿವಮೊಗ್ಗ, ಕಾಸರಗೋಡು, ಕೇರಳ, ಮಂಗಳೂರು, ಉಡುಪಿ ಕಡೆಯ ನಿರ್ಮಾಪಕರು ತಮ್ಮದೇ ಲೋಕಲ್ ವಿಷಯ ಇಟ್ಟು ತುಳು ಸಿನೆಮಾ ಮಾಡಿದರೆ ಅಂತಾರಾಷ್ಟಿçÃಯ ಫಿಲ್ಮ್ ಪೆಸ್ಟಿವಲ್‌ಗಳಲ್ಲಿ ಭಾಗವಹಿಸುತ್ತವೆ. ಪ್ರಶಸ್ತಿ ಗೆಲ್ಲುತ್ತವೆ. ನಮ್ಮ ಭಾಗ ಹಿಂದೆ ಬೀಳಬಾರದು ಎಂದು ಫಿಲ್ಮ್ ಫೆಸ್ಟಿವಲ್ ಮಾಡಲಾಗುತ್ತಿದೆ ಎಂದರು.
ಫಿಲA ಫೆಸ್ಟಿವಲ್‌ನಲ್ಲಿ ಕರ್ನಾಟಕ, ಅಸ್ಸಾಂ, ಮಹಾರಾಷ್ಟç, ಮುಂಬೈ, ದೆಹಲಿ ಸೇರಿ ದೇಶದ ವಿವಿಧೆಡೆಯಿಂದ ಆಗಮಿಸಿದ ಫಿಲಂ ಮೇಕರ್ಸ್ ತಮ್ಮ ನಿರ್ದೇಶನದ ಕಿರುಚಿತ್ರಗಳನ್ನು ಪ್ರದರ್ಶಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ್, ಕನ್ನಡ ರ‍್ಯಾಪರ್‌ಗಳಾದ ಎಂಸಿ ಔರಾ, ಎಂಸಿ ಬಿಜ್ಜು ಇತರರಿದ್ದರು.

ಬಾಕ್ಸ್
ಪ್ರಶಸ್ತಿ ಪ್ರದಾನ
ರಂಗಾಯಣದಲ್ಲಿ ನಡೆದ ಮನೋಮಯ ಸ್ಟುಡಿಯೋಸ್‌ನ ಅಂತಾರಾಷ್ಟಿçÃಯ ಫಿಲಂ ಫೆಸ್ಟಿವಲ್‌ನಲ್ಲಿ ಪತ್ರಿಕಾರಂಗದಲ್ಲಿ ಸೇವೆಗೈಯುತ್ತಿರುವ ಪತ್ರಕರ್ತರಾದ ಮಹೇಶ ಕುಲ್ಕರ್ಣಿ, ಭೀಮಾಶಂಕರ ಫಿರೋಜಾಬಾದ್ ಹಾಗೂ ಬ್ರಹ್ಮಾನಂದ ಅರಳಿ ಅವರಿಗೆ ಬೆಸ್ಟ್ ಪ್ರೆಸ್ ಪರ್ಸನಾಲಿಟಿ ಪ್ರಶಸ್ತಿ ಪ್ರದಾನ ಮಾಡಲಾಯಿತು.