ಜಿಲ್ಲೆ

ನಮ್ಮ ಬದುಕಿಗೆ ಪುರಾಣ ಪ್ರೇರಣಾ ಶಕ್ತಿ

ಕೊಡೇಕಲ್: ಶ್ರಾವಣ ಮಾಸದಲ್ಲಿ ನಡೆಯುವ ಪುರಾಣಗಳು ನಮ್ಮ ಬದುಕಿಗೆ ಪ್ರೇರಣಾ ಶಕ್ತಿ ನೀಡುತ್ತವೆ ಎಂದು ಮಹಲಿನ ಮಠದ ಶ್ರೀ ವೃಷಭೇಂದ್ರ ಅಪ್ಪ ನುಡಿದರು.

ಗ್ರಾಮದ ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡ ಶ್ರಾವಣ ಸಮಾರೋಪ ಕರ‍್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಮಹಾತ್ಮರ, ತಪಸ್ವಿಗಳ, ಆದರ್ಶ ಪುರುಷರ ಜೀವನ ಚರಿತ್ರೆಗಳ ಶ್ರವಣದಿಂದ ಉತ್ತಮ ಉತ್ತಮ ಸಂಸ್ಕಾರ ಲಭಿಸುತ್ತದೆ. ಇದರಿಂದ ಸುಂದರ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಯಾರು ಅಧ್ಯಾತ್ಮದಲ್ಲಿ ನಡೆಯುತ್ತಾರೋ ಅವರಿಗೆ ಧರ್ಮ ಅತಿ ಹತ್ತಿರದಲ್ಲಿರುತ್ತದೆ. ಎಲ್ಲರ ಹೃದಯದಲ್ಲಿ ದೇವರು ನೆಲೆಸಿರುತ್ತಾನೆ. ನಮ್ಮ ಹಿರಿಯರು ತೋರಿದ ಸನ್ಮಾರ್ಗ, ಸಂಸ್ಕೃತಿ ಮತ್ತು ಆಚರಣೆ ಸಂಪ್ರದಾಯವನ್ನು ಯಾರೂ ಮರೆಯಬಾರದು ಎಂದು ಕಿವಿ ಮಾತು ಹೇಳಿದರು.

ರಾಣಿ ರಂಗಮ್ಮ ಜಹಾಗೀರದಾರ, ರಾಜಾ ವೆಂಕಟಪ್ಪನಾಯಕ ಜಹಾಗೀರದಾರ, ಕೃಷ್ಟಪ್ಪನಾಯಕ, ಸಂಗಣ್ಣ ಮಹಲಿನಮಠ, ಬಸವರಾಜ ಭದ್ರಗೊಳ, ಅಲ್ಲಮಪ್ರಭು ಕೊಡೇಕಲ್ಮಠ, ಐ.ಜಿ.ಕೊಡೇಕಲ್ಮಠ, ಶಾಮಸುಂದರ ಜೋಶಿ, ರಂಗನಾಥ ದೋರಿ, ಕನಕು ಜಿರಾಳ, ದೇವು ಗೋಪಾಳಿ, ವಸಂತಗೌಡ ಮಾಲಿಗೌಡ್ರ, ಕನಕು ಜಿರಾಳ, ಸಂತೋಷ ಕೊಡೇಕಲ್ಮಠ, ಸಂಗಣ್ಣ ಪೂಜಾರಿ, ಪ್ರಭು ಪೂಜಾರಿ, ಸಂಗಪ್ಪ ಶಿವಪುರ, ವೀರಸಂಗಪ್ಪ ಹಾವೇರಿ, ಬಸವರಾಜ ಗೋನ್ಟಲ್, ಬಸಪ್ಪ ಪಂಜಗಲ್ ಇತರರಿದ್ದರು.

ಕೋರಿಸಂಗಯ್ಯ ಗಡ್ಡದ ಸ್ವಾಗತಿಸಿದರು. ಸಂಗನಬಸ್ಸು ಪಂಜಗಲ್ ವಂದಿಸಿದರು. ಬಸವರಾಜ ಕೆಂಡದ ನಿರೂಪಣೆ ಮಾಡಿದರು.