ಜಿಲ್ಲೆ

ನಮ್ಮ ಪಾಲಿನ ನೀರು ಬಳಸಲು ಸೋತಿದ್ದೇವೆ :  ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಬಿಜೆಪಿ ಸರ್ಕಾರ ವಿಲ ಎಂದ ಎಚ್​ಡಿಕೆ,  ಜಲಧಾರೆ ರಥಗಳ ಪರಿಶೀಲನೆ

ರಾಮನಗರ: ಆಂಧ್ರಪ್ರದೇಶ ಸರ್ಕಾರ ನೀರಾವರಿ ಯೋಜನೆಯೊಂದನ್ನು ಕೇವಲ ಮೂರೇ ವರ್ಷದಲ್ಲಿ ಪೂರ್ಣಗೊಳಿಸುತ್ತದೆ ಎನ್ನುವುದಾದರೆ ತೆರಿಗೆ ಸಂಗ್ರಹದಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಇದು ಏಕೆ ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಬಿಡದಿಯ ಕೇತಗಾನಹಳ್ಳಿಯ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಳೆದ 75 ವರ್ಷಗಳಲ್ಲಿ ನಮ್ಮ ನಾಡಿನ ನದಿ ನೀರನ್ನು ನಾವು ಬಳಕೆ ಮಾಡುವುದರಲ್ಲಿ ವಿಲರಾಗಿದ್ದೇವೆ. ರಾಜ್ಯ ಸರ್ಕಾರ ನೀರಾವರಿ ಯೋಜನೆಗೆ ಸಂಪನ್ಮೂಲ ಕ್ರೋಡಿಕರಿಸುವುದರಲ್ಲಿ ವಿಲವಾಗಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಸ್ತಿತ್ವದಲ್ಲಿದ್ದರೂ ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ವಿಲವಾಗಿವೆ ಎಂದರು.

ವಿರೋಧ ಪಕ್ಷದ ನಾಯಕರಾಗಿದ್ದ ಎಸ್​.ಆರ್​.ಪಾಟೀಲ್​ ಅವರೇ ಹೇಳಿರುವಂತೆ ಆಂಧ್ರಪ್ರದೇಶದಲ್ಲಿ 1.02 ಲ ಕೋಟಿ ರೂ.ಖರ್ಚು ಮಾಡಿ ಮೂರು ವರ್ಷದಲ್ಲಿ ನೀರಾವರಿ ಯೋಜನೆ ಪೂರ್ಣಗೊಳಿಸಲಾಗಿದೆ. ಆದರೆ, ದೇಶದಲ್ಲೇ ಅತಿಹೆಚ್ಚು ತೆರಿಗೆ ನೀಡುವ ರಾಜ್ಯಗಳಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದರೂ ಕೃಷ್ಣಾ ನದಿ ಮೂರನೇ ಹಂತದ ನೀರು ಬಳಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರು.

ನೀಡುವ ಹಣ ಯಾವುದಕ್ಕೂ ಸಾಲದಾಗಿದೆ: ಸರ್ಕಾರ ಹೆಚ್ಚಿನ ಹಣ ಮೀಸಲಿಟ್ಟರೆ ಯಾವುದೇ ಸಮಸ್ಯೆ ಇಲ್ಲದೆ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಬಹುದು. ಕೃಷ್ಣಾ ನದಿಯ ಮೂರನೇ ಹಂತಕ್ಕೆ ದಿನಕ್ಕೊಂದು ಅನುದಾನದ ಹೇಳಿಕೆ ನೀಡುತ್ತಿದೆ. ಸರ್ಕಾರದ ನಡೆ ಗಮನಿಸಿದರೆ, ನಾವು ಬದುಕಿರುವವರೆಗೂ ಈ ಯೋಜನೆ ಸಾಧ್ಯವಾಗುವುದಿಲ್ಲ ಎನಿಸುತ್ತದೆ. ವರ್ಷದಿಂದ ವರ್ಷಕ್ಕೆ ನೀರಾವರಿ ಯೋಜನೆಯ ಗಾತ್ರ ಏರಿಕೆಯಾಗುತ್ತಿದೆ. ಆದರೆ, ನೀಡುವ ಹಣ ಯಾವುದಕ್ಕೂ ಸಾಲದಾಗಿದೆ. ಹೀಗಾಗಿ, ನೀರಾವರಿ ಸಮಸ್ಯೆ, ನೀರಾವರಿ ವಿಚಾರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಮಾಡುತ್ತಿರುವ ದ್ರೋಹ ಕುರಿತು ಮನೆಮನೆಗೆ ಮಾಹಿತಿ ತಲುಪಿಸುವ ಸಲುವಾಗಿ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಚ್​.ಡಿ.ಕುಮಾರಸ್ವಾಮಿ ಹೇಳಿದರು.

ಇಂದು ಚಾಲನೆ: ರಾಜಕೀಯವಾಗಿ ಜನ್ಮ ನೀಡಿದ ರಾಮನಗರದ ಚಾಮುಂಡೇಶ್ವರಿ ಸನ್ನಿಧಿ-ಯಲ್ಲಿ ಮಂಗಳವಾರ ಬೆಳಗ್ಗೆ 10.30ಕ್ಕೆ ಪೂಜೆ, ನಂತರ ಕಾರ್ಯಕರ್ತರ ಸಭೆ ನಡೆಯಲಿದೆ. ಇದರೊಂದಿಗೆ 15 ಜಲಧಾರೆ ವಾಹನಗಳು ಜಲಸಂಗ್ರಹಣೆಯತ್ತ ಹೊರಡಲಿವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಏ.16ರಂದು ಜೆಡಿಎಸ್​ನ ಜಲಧಾರೆ ಕಾರ್ಯಕ್ರಮಕ್ಕೆ ಏಕಕಾಲದಲ್ಲಿ 15 ಕಡೆ ಚಾಲನೆ ನೀಡಲಾಗುವುದು. ಇದಕ್ಕೂ ಮುನ್ನ ರಥಯಾತ್ರೆಗೆ ಸಿದ್ಧಗೊಂಡಿರುವ ರಥಗಳನ್ನು ಈಗಾಗಲೇ ನಿಗದಿಪಡಿಸಿರುವ ನದಿ ಮೂಲಗಳ ಬಳಿ ಕಳಿಸಲು ಮಂಗಳವಾರ ಚಾಲನೆ ನೀಡಲಾಗುವುದು. ರಥಯಾತ್ರೆ ಬಳಿಕ ಮೊದಲ ಹಂತದ ವಾಹನಗಳು ಮೇ 4ರಂದು ಬೆಂಗಳೂರಿಗೆ ವಾಪಸಾಗಲಿದ್ದು, ದೂರದಿಂದ ಬರಲಿರುವ ವಾಹನಗಳು ಮೇ 8ರೊಳಗೆ ಬೆಂಗಳೂರು ತಲುಪಲಿವೆ. ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಗಂಗಾರತಿ ಕಾರ್ಯಕ್ರಮ ಮಾಡಿ, ಪದ ಕಚೇರಿಯಲ್ಲಿ ನಿರ್ಮಾಣಗೊಳ್ಳಲಿರುವ ಬೃಹತ್​ ಕಳಸದಲ್ಲಿ ಎಲ್ಲ ನದಿ ನೀರು ಶೇಖರಿಸಿ, ಮುಂದಿನ ಚುನಾವಣೆವರೆಗೂ ನಿತ್ಯ ಪೂಜೆ ಮಾಡಲಾಗುವುದು ಎಂದರು.

ಶಾಸಕ ಎ.ಮಂಜುನಾಥ್​ ಸೇರಿದಂತೆ ಜೆಡಿಎಸ್​ ಮುಖಂಡರು ಸುದ್ದಿಗೋಷ್ಠಿಯಲ್ಲಿದ್ದರು.

ಸವಾಲು ಸೋತರೆ ಪಕ್ಷ ವಿಸರ್ಜನೆ: ನೀರಾವರಿ ಮೂಲಕವೇ ಜನರ ಮನೆ ಬಾಗಿಲು ಸೇರಲು ಪ್ರಯತ್ನ ನಡೆಸಲಾಗುತ್ತಿದೆ. ಸರ್ಕಾರ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಹೀಗಾಗಿ ನನ್ನ ಅವಧಿಯಲ್ಲಿ ಸಾಲಮನ್ನಾ ಯೋಜನೆಗಾಗಿ 25 ಸಾವಿರ ಕೋಟಿ ರೂ. ಹೊಂದಿಸಿದ್ದೆ. ರಾಜ್ಯದ ನದಿ ನೀರು ಬಳಕೆ ಮಾಡಿಕೊಳ್ಳಲು ಕನಿಷ್ಠ 4ರಿಂದ 5 ಲ ಕೋಟಿ ರೂ.ಅಗತ್ಯ ಇದೆ. ಇದನ್ನು ಹೊಂದಿಸಲು ಕಷ್ಟವಾಗದು ಎಂದು ಎಚ್​.ಡಿ. ಕುಮಾರಸ್ವಾಮಿ ಹೇಳಿದರು. ಜನತೆ ನನಗೆ ಐದು ವರ್ಷ ಸ್ವತಂತ್ರ ಸರ್ಕಾರ ನೀಡಿದರೆ, ಎಲ್ಲ ಯೋಜನೆಗಳಿಗೂ ಚಾಲನೆ ನೀಡಲಾಗುವುದು. ಯಾವುದೇ ಕಾನೂನು ತೊಡಕು ಇರದಂತೆ ಕೆಲಸ ಮಾಡುತ್ತೇನೆ. ನಾನು ಸವಾಲಿನಲ್ಲಿ ಸೋತರೆ, ಜೆಡಿಎಸ್​ ವಿಸರ್ಜಿಸುತ್ತೇನೆ, ಇದು ನಾನು ಸ್ವೀಕರಿಸಿರುವ ಸವಾಲು ಎಂದು ಹೇಳಿದರು.