ಹಾಸನ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ನಮ್ಮಲ್ಲಿ ಯಾವುದೇ ಬಣ ರಾಜಕೀಯವಿಲ್ಲ, ಇರುವುದು ಒಂದೇ ಕಾಂಗ್ರೆಸ್ ಬಣ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿದರು.
ಸಚಿವರು ಶುಕ್ರವಾರ ಹಾಸನಂಬ ದೇವಿ ಮತ್ತು ಸಿದ್ದೇಶ್ವರ ಸ್ವಾಮಿ ದರ್ಶನ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪಕ್ಷದ ಹೈಕಮಾಂಡ್ ಆಗಿರುವಂತಹ ಸುರ್ಜಿವಾಲ ಹಾಗೂ ವೇಣುಗೋಪಾಲ್ ಅವರು ರಾಜಕೀಯವಾಗಿ ಮಾತನಾಡಬಾರದು ಎಂಬ ಕಟ್ಟುನಿಟ್ಟಿನ ಸೂಚನೆ ನೀಡಿರುವುದರಿಂದ ನಾನು ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ. ರಾಜ್ಯದಲ್ಲಿ ಐದು ವರ್ಷ ನಮ್ಮ ಸರ್ಕಾರ ಆಡಳಿತ ನಡೆಸುವುದು ನಿಶ್ಚಿತ ಎಂದು ಹೇಳಿದರು.
ರಾಜ್ಯದಲ್ಲಿ ಬರಗಾಲ ಆವರಿಸಿದೆ ಜನರಿಗೆ ನೀರು ಜಾನುವಾರುಗಳಿಗೆ ಮೇವು ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು. ನಾಲ್ಕವರೆ ವರ್ಷ ಈ ಬಗ್ಗೆ ಕಾರ್ಯೋನ್ಮುಖರಾಗಿ ಕೆಲಸ ಮಾಡುತ್ತೇವೆ. ಆನಂತರ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ಆಪರೇಷನ್ ಕಮಲನು ಇಲ್ಲ, ಏನು ಇಲ್ಲ, ನಮ್ಮ ಶಾಸಕರು ಒಟ್ಟಾಗಿದ್ದೇವೆ ಶಾದಿನು ಇಲ್ಲ, ಆಪರೇಷನ್ನು ಇಲ್ಲ ಎಂದು ಲೇವಡಿ ಮಾಡಿದ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ 28 ಸ್ಥಾನಗಳನ್ನ ಗೆಲ್ಲಲಿದೆ ಅದಲ್ಲದೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೂಡ ನಾವು ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳು ರಾಜ್ಯದ 6 ಲಕ್ಷಕ್ಕೂ ಹೆಚ್ಚು ಜನರಿಗೆ ತಲುಪಿದೆ. ಅಲ್ಪಸ್ವಲ್ಪ ಸಮಸ್ಯೆ ಉಂಟಾಗಿದೆ. ಅವುಗಳನ್ನು ಕೂಡ ಶೀಘ್ರದಲ್ಲೇ ಬಗೆಹರಿಸಲಾಗುವುದು ಆದರೆ ಬಿಜೆಪಿಯವರಿಗೆ ಬೇರೆ ಮಾತನಾಡಲು ಏನು ಇಲ್ಲದ ಕಾರಣ ಈ ರೀತಿ ಆರೋಪಗಳನ್ನ ಮಾಡುತ್ತಿದ್ದಾರೆ ಎಂದು ದೂರಿದರು.
ರಮೇಶ್ ಜಾರಕಿಹೊಳಿ ಭವಿಷ್ಯ ಹೇಳಲು ಅವರು ಏನು ಜ್ಯೋತಿಷ್ಯರೇ,ನಮ್ಮ ಸರ್ಕಾರ ಸುಭದ್ರವಾಗಿದೆ. ಮುಖ್ಯಮಂತ್ರಿಗಳ ಬದಲಾವಣೆ ಹಾಗೂ ಇನ್ನಿಲ್ಲದ ಆರೋಪಗಳು ಕೇವಲ ಊಹಾಪೋಹ ಎಂದು ಹೇಳಿದರು
ಬಿಜೆಪಿಯಿಂದ ಸಾಲದ ಹೊರೆ:
ಬಿಜೆಪಿ ಪಕ್ಷ ಹಿಂದೆ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿಯವರು ಆಡಳಿತ ಸಂದರ್ಭದಲ್ಲಿ 3,ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಈ ಹಿಂದೆ ಅವರು ಅಧಿಕಾರಕ್ಕೆ ಬರುವ ಮೊದಲು 2.5 ಲಕ್ಷ ಕೋಟಿ ಸಾಲ ಹೊಂದಿದ್ದರು. ಆದರೆ ಈಗ ಐದುವರೆ ಲಕ್ಷ ಕೋಟಿ ಸಾಲ ಇದೆ ಇವರು ಕೊಟ್ಟಿರುವುದು ಸಾಲದ ಹೊರೆ ಎಂದು ಆಕೋಶ ವ್ಯಕ್ತಪಡಿಸಿದರು
ಶೀಘ್ರದಲ್ಲೇ 8500 ಸಿಬ್ಬಂದಿಗಳ ನೇಮಕ:
ಇಂದಿನ ಸರ್ಕಾರಗಳು ಕೆಎಸ್‌ಆರ್‌ಟಿಸಿ ಇಲಾಖೆಯಿಂದ ನೇಮಕಾತಿಗಳನ್ನು ಮಾಡಿಕೊಂಡಿಲ್ಲ ಈಗಾಗಲೇ 13000 ನೌಕರರು ನಿವೃತ್ತಿಯಾಗಿದ್ದಾರೆ. ಆದ್ದರಿಂದ ಶೀಘ್ರದಲ್ಲಿ 8500 ನೌಕರರನ್ನು ನೇಮಕ ಮಾಡಿಕೊಳ್ಳಲಾಗುವುದು ಅಲ್ಲದೆ 5500 ಹೊಸ ಬಸುಗಳನ್ನು ಖರೀದಿ ಮಾಡಲಾಗುತ್ತಿದ್ದು ಅವು ಬಂದ ನಂತರ ಕೊರೋನ ಸಂದರ್ಭದಲ್ಲಿ ತೊಂದರೆಯಾಗಿರುವಂತಹ ಮಾರ್ಗಗಳಿಗೆ ಅವುಗಳನ್ನು ಬಿಡಲಾಗುವುದು ಎಂದು ಹೇಳಿದರು.
ಚುನಾವಣೆಯಲ್ಲಿ ಬಂದರು ಬರಗಾಲದಲ್ಲಿ ಬರಲಿಲ್ಲ:
ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮೋದಿ ಮತ್ತು ಅಮಿತ್ ಶಾ ಅವರು ರಾಜ್ಯಕ್ಕೆ 28 ಬಾರಿ ಬಂದು ಹೋಗಿದ್ದಾರೆ ರಸ್ತೆಗಳಲ್ಲಿ ರೋಡ್ ಶೋ ಮಾಡಿದ್ದಾರೆ ಸಭೆ ಮಾಡಿದ್ದಾರೆ ಆದರೆ ಚುನಾವಣೆ ಮುಗಿದ ಮೇಲೆ ಈಗ ಬರಗಾಲ ಆವರಿಸಿದೆ ಒಂದು ಬಾರಿ ಭೇಟಿ ನೀಡಿ ಪರಿಶೀಲನೆ ಮಾಡುವಂತಹ ಸೌಜನ್ಯೂ ಕೂಡ ಅವರಿಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಸಂದರ್ಭದಲ್ಲಿ ಓಡೋಡಿ ರಾಜ್ಯಕ್ಕೆ ಆಗಮಿಸುವ ಮೋದಿ ಮತ್ತು ಅಮಿತ್ ಶಾ ಈಗ ರಾಜ್ಯದ ಜನರ ಬಗ್ಗೆ ಕಾಳಜಿ ವಹಿಸುತ್ತಿಲ್ಲ, ಅಲ್ಲದೆ ಇಲ್ಲಿಯ ಸ್ಥಳೀಯ ಬಿಜೆಪಿ ನಾಯಕರು ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ, ನಮ್ಮ ರಾಜ್ಯದಿಂದ ಜಿಎಸ್‌ಟಿ ಸಂಗ್ರಹವಾಗುತ್ತಿದೆ. ಆದರೆ, ಬರಗಾಲದ ಸಂದರ್ಭದಲ್ಲಿ ಹೆಚ್ಚಿನ ಅನುದಾನವನ್ನು ಕೊಡಿಸುವಲ್ಲಿ ಅವರು ಕೂಡ ವಿಫಲರಾಗಿದ್ದಾರೆ ಎಂದು ದೂರಿದರು.
ಕೇಂದ್ರದ ಸಚಿವರು ಕೂಡ ರಾಜ್ಯಕ್ಕೆ ಆಗಮಿಸಿ ರಾಜ್ಯದ ವಸ್ತು ಸ್ಥಿತಿಯನ್ನು ತಿಳಿಯಲು ವಿಫಲರಾಗಿದ್ದಾರೆ. ನಮ್ಮ ಸರ್ಕಾರದ ಮಂತ್ರಿಗಳು ಅವರನ್ನ ಭೇಟಿ ಮಾಡಲು ಸಮಯ ಕೇಳಿದರೂ ಕೂಡ ನೀಡುತ್ತಿಲ್ಲ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನ ಭೇಟಿ ಮಾಡುವಂತಹ ಪರಿಸ್ಥಿತಿ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.