ಗೋಣಿಕೊಪ್ಪ :ನಿಟ್ಟೂರು-ಕಾರ್ಮಾಡು ಗ್ರಾಮದ ವಿಜಯ ಗ್ರಾಮೀಣ ಯುವಕ ಸಂಘದ ವತಿಯಿಂದ, ಗ್ರಾಮದ ಮೈದಾನದಲ್ಲಿ ಭಾನುವಾರ ಕೈಲ್‌ಪೊವ್ದ್ ಗ್ರಾಮೀಣ ಕ್ರೀಡಾಕೂಟದಲ್ಲಿ ಕಾಲ್ಚೆಂಡು, ಹಗ್ಗಜಗ್ಗಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಆಯೋಜಿಸಲಾಗಿತ್ತು.
ಕಾಲ್ಚೆಂಡು ಪಂದ್ಯದಲ್ಲಿ ಕಾರ್ಮಾಡು ವಿ.ಜಿ.ವೈ.ಎಸ್ ತಂಡ ಪ್ರಥಮ, ಬೆಂಡೆಕುತ್ತಿ ಹಾಡಿ ದ್ವಿತೀಯ, ಹಗ್ಗ ಜಗ್ಗಾಟದಲ್ಲಿ ಪೊನ್ನಿಮಾನಿ ಇಲಿವೆನ್ ಪ್ರಥಮ, ಕೊಟ್ಟಗೇರಿ ವಾರಿಯರ್ಸ್ ದ್ವಿತೀಯ ಸ್ಥಾನ ಪಡೆಯಿತು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ .22 ವಿಭಾಗದಲ್ಲಿ ಬಿ.ಆರ್.ರಮೇಶ್ ಪ್ರಥಮ, ಎಂ.ಪಿ.ಪ್ರತೀಕ್ ದ್ವಿತೀಯ, 12 ಬೋರ್ ವಿಭಾಗದಲ್ಲಿ ಮೇಚಂಡ ಶಾಂತ ಪೆಮ್ಮಯ್ಯ ಪ್ರಥಮ, ಎಂ.ಪಿ.ಪ್ರತೀಕ್ ದ್ವಿತೀಯ ಸ್ಥಾನ ಪಡೆದರು.
ಟ್ರೋಫಿ ದಾನಿ ಮಚ್ಚಮಾಡ ಸೀತಮ್ಮ ಸೋಮಯ್ಯ ಮಾತನಾಡಿ, ಹಿರಿಯರು ರೂಪಿಸಿರುವ ಕಲೆ, ಕ್ರೀಡೆ, ಸಂಪ್ರದಾಯ, ಅಚಾರ, ವಿಚಾರಗಳನ್ನು ಕಿರಿಯರು ಮೈಗೂಡಿಸಿಕೊಂಡಾಗ ಮಾತ್ರ ಆಚರಣೆ ಉಳಿಯಲು ಸಾಧ್ಯ. ನಮ್ಮ ಹಬ್ಬ ಹರಿದಿನಗಳು ಇದಕ್ಕೆ ವೇದಿಕೆ ನೀಡುತ್ತಿದೆ ಎಂದರು.
ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ, ಕೊಡಗು ದಿಶಾ ಸಮಿತಿ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ, ವಿಜಯ ಗ್ರಾಮೀಣ ಯುವಕ ಸಂಘದ ಕಾರ್ಯದರ್ಶಿ ಮುಕ್ಕಾಟಿರ ಸೋಮಯ್ಯ, ದಾನಿ ಮಚ್ಚಮಾಡ ಲೋಕೇಶ್ ಸೋಮಯ್ಯ, ಮುಖಂಡರಾದ ಕಾಟಿಮಾಡ ಕುಟ್ಟಪ್ಪ, ಕಳ್ಳೇಂಗಡ ಉತ್ತಯ್ಯ, ಕಳ್ಳೇಂಗಡ ಧನು ಕಾರ್ಯಪ್ಪ, ಮಾಚಂಗಡ ದರ್ಶನ್ ಸೋಮಣ್ಣ, ಪಟ್ಟಡ ಬೋಪಯ್ಯ, ವಿ.ಎಂ.ಸೂರ, ಬೊಟ್ಟಂಗಡ ಜೀವನ್, ಮುಕ್ಕಾಟಿರ ತೇಜ, ಪೊನ್ನಿಮಾಡ ಸಂತೋಷ್, ಕೊಟ್ಟಂಗಡ ಮಂಜುನಾಥ್, ಪಡಿಞರಂಡ ಪ್ರಭು ಕುಮಾರ್, ಇಗುತ್ತಪ್ಪ ಸಂಘದ ಅಧ್ಯಕ್ಷ ಕಾಟಿಮಾಡ ಶಿವಪ್ಪ ಮತ್ತಿತರರಿದ್ದರು.