ಬಾಗಲಕೋಟೆ ಪ್ರೆಸ್ ಕ್ಲಬ್ ನಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ತಮ್ಮ ಮೇಲೆ ಮಾಡುತ್ತಿರುವ ಆರೋಪಗಳಿಗೆ ಸ್ಪಷ್ಟೀಕರಣ ನೀಡಿದರು. ಜಿ.ಪಂ. ಹೂವಪ್ಪ ರಾಠೋಡ, ತಾಪಂ ಮಾಜಿ ಅಧ್ಯಕ್ಷ ಶ್ರೀಶೈಲ ಗೌರಿ ಮತ್ತಿತರರು ಇದ್ದರು. 
ಜಿಲ್ಲೆ

ನನ್ನಿಂದ ಯಾವುದೇ ಲೋಪವಾಗಿಲ್ಲ…!

ಬಾಗಲಕೋಟೆ: ಮಾಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡದೇ ತಾರತಮ್ಯ ಮಾಡುತ್ತಿದ್ದಾರೆ ಎನ್ನುವ ಕಾಂಗ್ರೆಸ್ಸಿಗರ ಆರೋಪಕ್ಕೆ ಮಾಜಿ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ ನೀಡಿದ್ದಾರೆ...!


ಬಾಲಕೋಟೆ ಪ್ರೆಸ್ ಕ್ಲಬ್ ನಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ನಿರಾಣಿ, ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಕುರಿತು ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಆಗಲಿದ್ದ ೪.೫೦ ಕೋಟಿ ರೂ.ಗಳ ನಷ್ಟವನ್ನು ನಾನು ತಪ್ಪಿಸಿದ್ದೇನೆ. ಹೀಗಾಗಿ ನನ್ನದು ಯಾವುದೇ ಲೋಪ ಇಲ್ಲ. ಕಾಂಗ್ರೆಸ್ ಪಕ್ಷದವರು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ ಎಂದು ತಿಳಿಸಿದ್ದಾರೆ.

ನಾನು ಕೈಗಾರಿಕೆ ಸಚಿವ ಇದ್ದಾಗ ೨೦೨೨ರಲ್ಲಿ ನಡೆದ ಘಟನೆ ಇದು. ನನ್ನ ಗಮನಕ್ಕೆ ಇಲ್ಲದೇ ಅಽಕಾರಿಗಳು ಈ ಒಪ್ಪಂದ ಮಾಡಿಕೊಂಡಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆ ಐದು ನಿಮಿಷದ ವಿಡಿಯೋಗೆ ಇಷ್ಟೊಂದು ದುಡ್ಡು ಯಾಕೆ ಎಂದು ನಾನೇ ತಡೆದಿದ್ದೆ. ಈ ಬಗ್ಗೆ ಸಂಬಂಽಸಿದವರು ತಮಗೆ ಬಿಲ್ ಪಾವತಿಸಿಲ್ಲ ಎಂದು ಕೋರ್ಟ್ ಮೆಟ್ಟಿಲು ಏರಿದ್ದರು ಎಂದರು.

ಆದರೆ, ಈ ವಿಷಯವನ್ನು ತಿಳಿದುಕೊಳ್ಳದೇ ಕಾಂಗ್ರೆಸ್ ಮುಖಂಡರು ಸುಖಾಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಅದು ಪ್ರಕರಣ ಏನು ಎನ್ನುವುದಾದರೂ ತಿಳಿದುಕೊಳ್ಳಬೇಕಲ್ಲವೆ? ನಿರಾಣಿ ಅವರ ವಿರುದ್ಧ ಯಾವ ಕಾರಣಕ್ಕೆ ಪ್ರಾಸಿಕ್ಯೂಷನ್ ಕೊಡಬೇಕು ಎಂದು ಈ ವರೆಗೂ ಯಾರೂ ಹೇಳುತ್ತಿಲ್ಲ. ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ಅನುಭವ ಉಳ್ಳವರು ಇದ್ದಾರೆ. ಅವರು ಈ ವಿಚಾರ ತಿಳಿದುಕೊಂಡು ಬಳಿಕ ಮಾತನಾಡಬೇಕು ಎಂದು ಸಲಹೆ ನೀಡಿದರು.

ನಾನು ತಪ್ಪು ಮಾಡಿದ್ದರೆ ತನಿಖೆಗೆ ಸಿದ್ದ ಇದ್ದೇನೆ. ಹಾಗೆಯೇ ನೀವು ಸಹ ನಿಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ, ನಿಮ್ಮದು ತಪ್ಪಿಲ್ಲ ಎಂದು ಸಾಬೀತಾದರೆ ಮರಳು ಅಧಿಕಾರ ಪಡೆಯಿರಿ. ನೀವುಗಳು ಸುಮ್ಮನೆ ನನ್ನ ಮೇಲೆ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಬಾರದು. ನಿಮ್ಮ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಎಲ್ಲ ಅಗತ್ಯ ದಾಖಲೆಗಳ ಸಮೇತ ಆರೋಪ ಮಾಡುತ್ತಿದ್ದೇವೆ. ನಿಮ್ಮ ಬಳಿ ನಮ್ಮ ಬಗ್ಗೆ ದಾಖಲೆಗಳು ಇದ್ದರೆ ತೋರಿಸಿ? ಇನ್ನು ರಾಜ್ಯಪಾಲರು ತಮ್ಮ ಬಳಿ ಯಾವುದೇ ಪ್ರಾಸಿಕ್ಯೂಷನ್ ಗೆ ಸಂಬಂಧಿಸಿದ ಅರ್ಜಿಗಳು ಬಾಕಿ ಇಲ್ಲ ಎಂದಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಹೂವಪ್ಪ ರಾಠೋಡ, ತಾಪಂ ಮಾಜಿ ಅಧ್ಯಕ್ಷ ಶ್ರೀಶೈಲ ಗೌರಿ ಮತ್ತಿತರರು ಇದ್ದರು.