ಎಸ್.ಆರ್.ಪಾಟೀಲ 
ಜಿಲ್ಲೆ

ನನ್ನ ಸ್ಪರ್ಧೆ ಪಕ್ಷದ ತೀರ್ಮಾನ

ಬಾಗಲಕೋಟೆ: ನಾನು ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಸ್ಪರ್ಧೆ ಮಾಡು ಅಂತ ತಿಳಿಸಿದರೇ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ವಿ.ಪ ಮಾಜಿ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೋ ಕಾರಣಕ್ಕೂ ಪಕ್ಷ ಬಿಡುವದಿಲ್ಲ. ಪಕ್ಷ ಹೇಳುವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ. ಬೇಡ ಎಂದರೇ ಸ್ಪರ್ಧೆ ಮಾಡುವದಿಲ್ಲ ಎಂದರು.
ಈ ವೇಳೆ ಬಸವರಾಜ ರಾಯರೆಡ್ಡಿ ಮಾತನಾಡಿ, ಎಸ್.ಆರ್.ಪಾಟೀಲ ಅವರನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಕಡೆಗಣಿಸಿಲ್ಲ. ಅವರ ಸೇವೆ, ನಾಯಕತ್ವ ಪಕ್ಷ ಬಳಸಿಕೊಳ್ಳಲಿದೆ. ಪಕ್ಷದ ಶಿಸ್ತಿನ ನಾಯಕರಾಗಿದ್ದಾರೆ. ಇಂತಹ ನಾಯಕರು ನಮಗೆ ಬೇಕು. ಆಯಾ ಕಾಲಘಟದಲ್ಲಿ ವ್ಯತ್ಯಾಸವಾಗಿರುತ್ತದೆ. ಅವು ಅನ್ಯಾಯ, ನ್ಯಾಯ ಎನ್ನಲು ಬರುವದಿಲ್ಲ. ಪಾಟೀಲರ ವಿಷಯದಲ್ಲಿ ಪಕ್ಷ ಕೈ ಬಿಡುವದಿಲ್ಲ ಎಂದು ಹೇಳಿದರು.