ಜಿಲ್ಲೆ

‘ನನ್ನ ಜೀವನ ನನ್ನ ಸ್ವಚ್ಛ ನಗರ’ ಕಾರ್ಯಕ್ರಮ ಇಂದು

ಸೋಮವಾರಪೇಟೆ : ಪಟ್ಟಣ ಪಂಚಾಯಿತಿ ವತಿಯಿಂದ ‘ನನ್ನ ಜೀವನ ನನ್ನ ಸ್ವಚ್ಛ ನಗರ’ ಕಾರ್ಯಕ್ರಮವನ್ನು ಮೇ 22ರಂದು ಬೆಳಗ್ಗೆ 9.30 ಗಂಟೆಗೆ ಜೇಸಿ ವೇದಿಕೆಯಲ್ಲಿ ಆಯೋಜಿಸಲಾಗಿದೆ. ಪಂಚಾಯಿತಿ ವ್ಯಾಪ್ತಿಯ ನಾಗರಿಕರು ಮತ್ತು ಸಾರ್ವಜನಿಕರಿಗೆ ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಗೆ ತ್ಯಾಜದ ಪ್ರಮಾಣ ಕಡಿತಗೊಳಿಸುವುದು (ರೆಡ್ಯೂಷ್), ತ್ಯಾಜ್ಯದ ಮರುಬಳಕೆ (ರೆಸ್ಯೂ), ತ್ಯಾಜ್ಯದ ಮರು ಉಪಯೋಗದ (ರೀಸೈಕಲ್) ಬಗ್ಗೆ ಮೇ 20ರಿಂದ ಜೂನ್, 5ರವರೆಗೆ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ ಈಗಾಗಲೇ ಸ್ಥಾಪಿಸಿರುವ ಕೇಂದ್ರಕ್ಕೆ ಮತ್ತು ವಾಹನಕ್ಕೆ ಸಾರ್ವಜನಿಕರು ತ್ಯಾಜ್ಯವನ್ನು ನೀಡಿ ಯಶಸ್ವಿಗೊಳಿಸಲು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಮನವಿ ಮಾಡಿದ್ದಾರೆ.
ಉಪಯೋಗಿಸಿದ ಪ್ಲಾಸ್ಟಿಕ್ ಸಾಮಗ್ರಿಗಳು, ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಮಕ್ಕಳ ಪ್ಲಾಸ್ಟಿಕ್ ಆಟಿಕೆಗಳು, ಬಟ್ಟೆಗಳು, ಹಳೇ ಜೀನ್ಸ್, ಯೂನಿಫಾರಂ, ಸೀರೆಗಳು, ಬಟ್ಟೆಗಳು, ಚಪ್ಪಲಿ, ಶೂಗಳು, ನ್ಯೂಸ್ ಪೇಪರ್, ಹಳೇ ಪುಸ್ತಕಗಳು ಮತ್ತಿತರ, ಎಲೆಕ್ಟ್ರಿಕಲ್ ಸಾಮಗ್ರಿಗಳನ್ನು ಸಾರ್ವಜನಿಕರು ನೀಡಬೇಕಿದೆ. ಭಾಗವಹಿಸುವ ಎಲ್ಲ ಸಾರ್ವಜನಿಕರಿಗೆ ಡಿಜಿಟಲ್ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.