ಜಿಲ್ಲೆ

ನದಿಯಲ್ಲಿ ಕಾಲು ಜಾರಿ ಬಿದ್ದು ಕೂಲಿ ಕಾರ್ಮಿಕ ಸಾವು

ಯಳಂದೂರು: ಪಟ್ಟಣದಲ್ಲಿ ಹರಿಯುವ ಸುವರ್ಣಾವತಿ ನದಿಯಲ್ಲಿ ಕೂಲಿ ಕಾರ್ಮಿಕರೊಬ್ಬರು ಜಾರಿ ಬಿದ್ದು ಸಾವಿಗೀಡಾಗಿದ್ದು, ಭಾನುವಾರ ಶವವಾಗಿ ಸಿಕ್ಕಿದ್ದಾರೆ.

ಟ್ಟಣದ ಬಳೇಪೇಟೆಯ ದಾಸೀಗೇರಿ ನಿವಾಸಿ ಶಂಕರ (45) ಮೃತಪಟ್ಟವರು. ಇವರು ಅ.18ರಂದು ಮಧ್ಯಾಹ್ನ ಗಾರೆ ಕೆಲಸ ಮುಗಿಸಿ ಊಟದ ಸಮಯದಲ್ಲಿ ಸುವರ್ಣಾವತಿ ನದಿ ತೀರದಲ್ಲಿ ಕೈಕಾಲು, ಮುಖ ತೊಳೆಯಲು ತೆರಳುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ನದಿಗೆ ಬಿದ್ದು ಮುಳುಗಿ ಸಾವಿಗೀಡಾಗಿದ್ದಾರೆ ಎಂದು ಶಂಕಿಸಲಾಗಿದೆ. ಭಾನುವಾರ ಬೆಳಗ್ಗೆ ನದಿಯಲ್ಲಿ ನೀರು ಕಡಿಮೆಯಾಗಿದ್ದು, ಇವರ ಶವ ದೊರಕಿದೆ. ಸ್ಥಳಕ್ಕೆ ಪಟ್ಟಣ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಮೇಲೆತ್ತಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೊತ್ತರ ಪರೀಕ್ಷೆ ನಡೆಸಿ ನಂತರ ವಾರಸುದಾರರಿಗೆ ಒಪ್ಪಿಸಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇವರಿಗೆ ಪತ್ನಿ, ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ.