ಬಾಗಲಕೋಟೆ: ಆಟವಾಡುತ್ತಾ ಆಯಾತಪ್ಪಿ ಮಲಪ್ರಭಾ ನದಿಯಲ್ಲಿ ಕಾಲುಜಾರಿ ಬಿದ್ದು ಬಾಲಕ ನಾಪತ್ತೆಯಾದ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಕಾಟಾಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ವಿನೋದ ಸಣ್ಣಗೌಡರ (೬) ನಾಪತ್ತೆಯಾದ ಬಾಲಕ. ತಾಯಿಯ ಜೊತೆ ಬಟ್ಟೆ ತೊಳೆಯಲು ಮಲಪ್ರಭಾ ನದಿಗೆ ಹೋಗಿದ್ದ ಬಾಲಕ ವಿನೋದ ನದಿದಡದಲ್ಲಿ ಆಟವಾಡುತ್ತಿದ್ದ ಆಯಾ ತಪ್ಪಿ ಕಾಲು ಜಾರಿ ಬಿದ್ದಿದ್ದಾನೆ. ನದಿ ನೀರು ರಭಸವಾಗಿ ಹರಿಯುತ್ತಿದ್ದ ಕಾರಣ, ನೀರಿನ ಜೊತೆ ಬಾಲಕ ವಿನೋದ ಕಾಣೆಯಾಗಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರಿಂದ ಬಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ ರಾತ್ರಿ ವರೆಗೂ ಪತ್ತೆಯಾಗಿಲ್ಲ. ಬಾದಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.