ಕಲಬುರಗಿ : ಜಿಲ್ಲೆಯಷ್ಟೇ ಅಲ್ಲದೇ ಮಹಾರಾಷ್ಟ್ರದ ಹಲವು ಕಡೆ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಪ್ರಮುಖ ನದಿ ಭೀಮಾ ಸೇರಿದಂತೆ ಹಲವು ಉಪ ನದಿಗಳು ತುಂಬಿ ಹರಿಯುತ್ತಿವೆ.
ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜಿಗೆ ಉಜನಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಬಿಡಲಾಗಿದ್ದು, ಹೀಗಾಗಿ 70 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇಷ್ಟೇ ಪ್ರಮಾಣದ ನೀರನ್ನು ಭೀಮಾ ನದಿಗೆ ಬಿಡುತ್ತಿರುವುದರಿಂದ ನದಿ ಪಾತ್ರದ ಹಳ್ಳಿಗಳು ಅಪಾಯದ ಅಂಚಿನಲ್ಲಿವೆ.
ನದಿ ಪಾತ್ರದ ಜನತೆ ಎಚ್ಚರದಿಂದಿರುವಂತೆ ಸೂಚಿಸಲಾಗಿದೆ. ವಿಶೇಷವಾಗಿ ಅಫಜಲಪುರ, ಜೇವಗರ್ಿ, ಕಲಬುರಗಿ ಮತ್ತು ಚಿತ್ತಾಪುರ ತಾಲೂಕುಗಳಿಗೆ ಹಾಗೂ ಯಾದಗಿರಿ ಜಿಲ್ಲೆಯ ಕೆಲವು ಕಡೆ ಈ ನದಿ ಅಪಾಯ ತಂದುವೊಡ್ಡಬಲ್ಲದಾಗಿದೆ.
ಮಂಗಳವಾರ ತಡರಾತ್ರಿ ವ್ಯಾಪಕ ಮಳೆ ಸುರಿದ ಪರಿಣಾಮ ಜಿಲ್ಲೆಯ ಬಹುತೇಕ ಜಲಾಶಯಗಳಿಗೆ ನೀರಿನ ಒಳ ಹರಿವು ಹೆಚ್ಚಾದ ಪರಿಣಾಮ ನದಿಗೆ ನೀರು ಹರಿಬಿಡಲಾಗುತ್ತಿದೆ ಎಂದು ಕನರ್ಾಟಕ ನೀರಾವರಿ ನಿಗಮ ನಿಯಮಿತ ಕಲಬುರಗಿ ವೃತ್ತದ ಅಧೀಕ್ಷಕ ಅಭಿಯಂತ ಜಗನ್ನಾಥ ಹಾಲಿಂಗೆ ತಿಳಿಸಿದ್ದಾರೆ. ಕಮಲಾಪುರ ತಾಲೂಕಿನ ಗಂಡೋರಿ ನಾಲಾ ಜಲಾಶಯಕ್ಕೆ 35000 ಕ್ಯೂಸೆಕ್ ನೀರು ಬರುತ್ತಿದ್ದು 30000 ಕ್ಯೂ ನೀರನ್ನು ನದಿಗೆ ಬಿಡಲಾಗಿದೆ. ಆಳಂದ ತಾಲೂಕಿನ ಅಮಜರ್ಾ ಜಲಾಶಯದ ಒಳಹರಿವು 15000 ಕ್ಯೂ. ಇದ್ದು, 13000 ಕ್ಯೂ. ನೀರನ್ನು ಅಮಜರ್ಾ ನದಿಗೆ ಬಿಡಲಾಗಿದೆ. ಕಮಲಾಪುರ ತಾಲೂಕಿನ ಬೆಣ್ಣೆತೋರಾ ಜಲಾಶಯಕ್ಕೆ 80,510 ನೀರು ಹರಿದು ಬರುತ್ತಿದ್ದು, 59350 ಕ್ಯೂ.ನೀರನ್ನು ಜಲಾಶಯದಿಂದ ಬಿಡಲಾಗಿದೆ. ಲೋವರ್ ಮುಲ್ಲಾಮಾರಿ ಜಲಾಶಯಕ್ಕೆ 38500 ಕ್ಯೂ.ನೀರು ಬರುತ್ತಿದ್ದು, 57000 ಕ್ಯೂ. ನೀರು ಹೊರಬಿಡಲಾಗಿದೆ. ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಜಲಾಶಯದ ಒಳ ಹರಿವು 6395 ಕ್ಯೂ.ಇದ್ದರೆ, ಹೊರ ಹರಿವು 6125 ಕ್ಯೂ.ಇದೆ. ಅಪ್ಪರ ಮುಲ್ಲಾಮಾರಿ ಜಲಾಶಯದಲ್ಲಿ 13020 ಕ್ಯೂ.ನೀರು ಒಳ ಹರಿವಿದ್ದು, ಅಷ್ಟೆ ಪ್ರಮಾಣದ ನೀರು ಹೊರ ಬಿಡಲಾಗಿದೆ.