ಜಿಲ್ಲೆ

ನಡೆದಿದೆ ರಾಜಕೀಯ ಕೆಸರೆರಚಾಟ

ಸುಭಾಸ ಹೆಗಡೆ ಧೂಪದಹೊಂಡ

ಕಾರವಾರ: ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜ್(ಕ್ರಿಮ್್ಸ) ಜತೆ ನಿರ್ವಣಕ್ಕೆ ಯೋಜಿಸಿರುವ 450 ಹಾಸಿಗೆಗಳ ಆಸ್ಪತ್ರೆ ಈಗ ವಿವಾದದ ಕೇಂದ್ರವಾಗಿದೆ. ರಾಜಕೀಯ ಕೆಸರೆರಚಾಟವೂ ಶುರುವಾಗಿದೆ.

‘150 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ವಣಕ್ಕೆ ಯೋಜಿಸಿ, ಟೆಂಡರ್ ಕರೆಯಲಾಗಿದ್ದರೂ ಶಂಕುಸ್ಥಾಪನೆಯ ನೆಪದಲ್ಲಿ ಕಾಮಗಾರಿ ಪ್ರಾರಂಭಕ್ಕೆ ವಿಳಂಬವಾಗಿದೆ. ಇದರಲ್ಲಿ ಶಾಸಕಿ ರೂಪಾಲಿ ನಾಯ್ಕ ಅವರ ಪರ್ಸೆಂಟೇಜ್ ವ್ಯವಹಾರದ ಆರೋಪವಿದೆ. ತನಿಖೆ ನಡೆಸಬೇಕು’ ಎಂದು ಕಾರವಾರ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯ್ಕ ಎಸಿಬಿಗೆ ದೂರು ನೀಡಿದ್ದರು. ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದರು.

ಶಾಸಕಿ ಮೇಲಿನ ಆರೋಪವನ್ನು ಬಿಜೆಪಿ ಮುಖಂಡರು ಅಲ್ಲಗಳೆದಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ ಅವರು, ಮಾಧವ ನಾಯ್ಕ ಹತ್ತಿ ಇಲ್ಲದೆ ನೂಲು ತೆಗೆಯಲು ಹೊರಟಿದ್ದಾರೆ. ಯಾವುದೇ ದಾಖಲೆ ಇಲ್ಲದೇ ಶಾಸಕಿ ವಿರುದ್ಧ ಆರೋಪ ಮಾಡಿದ್ದಾರೆ. ರೂಪಾಲಿ ನಾಯ್ಕ ಅವರ ಪ್ರಯತ್ನದಿಂದಲೇ ಆಸ್ಪತ್ರೆ ನಿರ್ವಣಕ್ಕೆ 150 ಕೋಟಿ ಮಂಜೂರಾಗಿದೆ. ಕಾಮಗಾರಿ ವಿಳಂಬಕ್ಕೆ ಜಾಗದ ಸಮಸ್ಯೆ ಕಾರಣ. ಅದಕ್ಕೆ ಬೇಕಾದ ಎಲ್ಲ ದಾಖಲೆಗಳೂ ನಮ್ಮ ಬಳಿ ಇವೆ ಎಂದರು.

ಜೈಲು ಸ್ಥಳಾಂತರ ವಿಚಾರ ವಿಳಂಬಕ್ಕೆ ಕಾರಣ

450 ಹಾಸಿಗೆಗಳ ಆಸ್ಪತ್ರೆ ನಿರ್ವಣಕ್ಕೆಕ್ರಿಮ್್ಸ ಪಕ್ಕದಲ್ಲಿರುವ ಜಿಲ್ಲಾ ಕಾರಾಗೃಹ ಸ್ಥಳಾಂತರ ಪ್ರಸ್ತಾಪವಿತ್ತು. ಆದರೆ, ಅದು ಬಗೆಹರಿಯದ ಕಾರಣ ಆಸ್ಪತ್ರೆ ಕಟ್ಟಡ ಕಾಮಗಾರಿಯೂ ವಿಳಂಬವಾಗಿದೆ ಎಂಬುದು ಬಿಜೆಪಿ ದಾಖಲೆಗಳನ್ನು ಬಿಡುಗಡೆ ಮಾಡಿ ಸ್ಪಷ್ಟ ಪಡಿಸಿದೆ. ಸರ್ಕಾರಿ ಮೆಡಿಕಲ್ ಕಾಲೇಜ್​ನ ಜತೆ 450 ಹಾಸಿಗೆಗಳ ಆಸ್ಪತ್ರೆ ನಿರ್ವಣಕ್ಕೆ 2018 ರ ಬಜೆಟ್​ನಲ್ಲಿ 150 ಕೋಟಿ ರೂ. ಆರೋಗ್ಯ ಇಲಾಖೆ ಇಂಜಿನಿಯರಿಂಗ್ ವಿಭಾಗಕ್ಕೆ ಬಿಡುಗಡೆಯಾಗಿತ್ತು. 2020 ರಲ್ಲಿ ಟೆಂಡರ್ ಪ್ರಕ್ರಿಯೆ ನಡೆದು ಬಿಆರ್​ಎಸ್ ಇನ್ಪ್ರಾಸ್ಟ್ರಕ್ಚರ್ ಪ್ರೖೆ.ಲಿ ಎಂಬ ಕಂಪನಿ 144.51 ಕೋಟಿ ರೂ.ಗೆ ಟೆಂಡರ್ ಪಡೆದಿದೆ. 2020 ರ ಫೆಬ್ರವರಿಯಲ್ಲಿ ಕಾಮಗಾರಿ ನಡೆಸಲು ಕಾರ್ಯಾದೇಶ ನೀಡಲಾಗಿದೆ. ಆದರೆ, ಕ್ರಿಮ್್ಸ ಹಾಗೂ ಜಿಲ್ಲಾ ಕಾರಾಗೃಹದ ನಡುವಿನ ಗಡಿ ಗೊಂದಲ ಕಾಮಗಾರಿಗೆ ಅಡ್ಡಿಯಾಯಿತು. ಜಾಗದ ಜಂಟಿ ಸರ್ವೆ ನಡೆಸಿ ಏಪ್ರಿಲ್​ನಲ್ಲಿ ತಾಂತ್ರಿಕ ಸಮಸ್ಯೆ ಬಗೆಹರಿಸಲಾಯಿತು. ಆದರೆ, ಲಾಕ್​ಡೌನ್ ಜಾರಿಯಾಯಿತು. ಇದರಿಂದ ಕಾಮಗಾರಿ ಕೊಂಚ ವಿಳಂಬವಾಗಿದೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ. ಈ ಸಂಬಂಧ ಆರೋಗ್ಯ ಇಲಾಖೆ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಕ್ರಿಮ್್ಸ ನಿರ್ದೇಶಕರಿಗೆ ಬರೆದ ಪತ್ರ ಬಿಡುಗಡೆ ಮಾಡಿದ್ದಾರೆ.

ಆರೋಗ್ಯ ವ್ಯವಸ್ಥೆ ಅತಿ ಅವಶ್ಯಕ ಸೇವೆಗಳಲ್ಲಿ ಒಂದು. ಶಂಕುಸ್ಥಾಪನೆಯಾಗಿಲ್ಲ ಎಂಬ ಕಾರಣಕ್ಕೆ ಕಾಮಗಾರಿ ವಿಳಂಬ ಮಾಡುವುದು ಸರಿಯಲ್ಲ. ಇದರಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ವಾರದ ಒಳಗೆ ಚಾಲನೆ ನೀಡಬೇಕು. ಇಲ್ಲದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿ ಸಿಎಂ ಅವರಿಗೆ ಪತ್ರ ಬರೆಯಲಾಗಿದೆ.| ಮಾಧವ ನಾಯ್ಕತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ
ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಕ್ರಿಮ್್ಸ ಆಸ್ಪತ್ರೆ ಕಟ್ಟಡ ಶಂಕುಸ್ಥಾಪನೆಗೆ ಬರುವುದಾಗಿ ಭರವಸೆ ನೀಡಿದ್ದಾರೆ. ಕೋವಿಡ್ ಹಾಗೂ ವಿವಿಧ ಕಾರಣಗಳಿಂದ ಕೊಂಚ ವಿಳಂಬವಾಗಿದೆ. ಅದನ್ನೇ ಕಾರಣವಾಗಿಟ್ಟು ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಆರೋಪಗಳು ಸತ್ಯಕ್ಕೆ ದೂರವಾಗಿವೆ. ಇದೇ ತಿಂಗಳಲ್ಲಿ ಸಿಎಂ ಅವರೇ ಸ್ವತಃ ಬಂದು ಕಾಮಗಾರಿಗೆ ಚಾಲನೆ ನೀಡುವರು.| ರೂಪಾಲಿ ನಾಯ್ಕ ಶಾಸಕಿ