ಜಿಲ್ಲೆ

ನಟ ಉಪೇಂದ್ರ ಬಂಧನಕ್ಕೆ ಆಗ್ರಹ

ಹುಮನಾಬಾದ್: ದಲಿತರಿಗೆ ಅವಹೇಳನ ಮಾಡಿರುವ ನಟ ಉಪೇಂದ್ರ ವಿರುದ್ಧ ಕ್ರಮ ಕೈಗೊಂಡು, ಬಂಧನ ಮಾಡಬೇಕು ಎಂದು ಆಗ್ರಹಿಸಿ ಪಟ್ಟಣದ ತಹಸಿಲ್ ಕಚೇರಿ ಎದುರು ತಾಲೂಕು ದಲಿತ ಸಂಘಟನೆಗಳ ಒಕ್ಕೂಟದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡುವಾಗ ದಲಿತರ ಬಗ್ಗೆ ಅವಹೇಳನ ಮಾಡಿದ್ದಾರೆ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಚಿತ್ರದುರ್ಗದ ಕಾವಾಡಿಗರಹಟ್ಟಿಯಲ್ಲಿ ವಿಷಪೂರಿತ ನೀರಿನ ಏಳು ಜನ ಬಲಿಯಾಗಿದ್ದು, ಕಾರಣರಾದವರಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅಂಜುಮ್ ತಬಸುಮ್ ಅವರಿಗೆ ಸಲ್ಲಿಸಲಾಯಿತು. ಒಕ್ಕೂಟದ ಅಧ್ಯP್ಷÀ ಗೌತಮ್ ಸೆಡೋಳ, ಗೌರವಾಧ್ಯಕ್ಷ ಸುರೇಶ ಘಾಂಗ್ರೆ, ಪ್ರಧಾನ ಕಾರ್ಯದರ್ಶಿ ಶಿವಾನಂದ ಕಟ್ಟಿಮನಿ, ಗೌತಮ ಪ್ರಸಾದ್, ಉಪಾಧ್ಯಕ್ಷ ಗಣಪತಿ ಅಷ್ಟೂರೆ, ಅನೀಲ ದೊಡ್ಡಿ, ಪ್ರಮುಖರಾದ ಶಿವರಾಜ ಹುಡಗೀಕರ, ವೈಜನಾಥ ಸಿಂಧೆ, ತುಕರಾಮ ಸೋನಕೇರಾ, ಅಂಕುಶ ಪ್ರಸಾದ್, ಲೊಕೇಶ ಮೇತ್ರೆ, ಶರಣಪ್ಪ ಮೇತ್ರೆ, ಸುನೀಲ ಭೋಲಾ ಇತರರಿದ್ದರು.