ಬಳ್ಳಾರಿ : ಮುಡಾ ಹಗರಣದ ನೈತಿಕ ಹೊಣೆ ಹೊತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಹಾಗೂ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಎಂಎಲ್‌ಸಿ ವೈ.ಎಂ.ಸತೀಶ್ ಒತ್ತಾಯಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಬರೆದಿದ್ದ ಪತ್ರ ಹಾಗೂ ರಚಿಸಲಾಗಿದ್ದ ಕಮಿಟಿ ವರದಿವನ್ನು ಬಹಿರಂಗ ಪಡಿಸಬೇಕು ಎಂದು ತಿಳಿಸಿದರು.
ಬಿಜೆಪಿ ಜಿಲ್ಯ್‌ಕ್ಷ ಅನಿಲ್ ಕುಮಾರ ಮೋಕಾ ಮಾತನಾಡಿ, ಸುಪ್ರೀಂಕೋರ್ಟ ಆದೇಶ ತಿರುಚಿ ಬಿಡಿ ನಿವೇಶನಗಳನ್ನ ಸಿಎಂ ಸಿದ್ಧರಾಮಯ್ಯ ಅವರು ಪತ್ನಿ ಹೆಸರಿನಲ್ಲಿ ಪಡೆಯುವ ಮೂಲಕ ಮುಡಾದಲ್ಲಿ ಹಗರಣಕ್ಕೆ ಕಾರಣರಾಗಿದ್ದಾರೆ. ಮುಡಾ ಹಗರಣ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು. ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಜಿಲ್ಲೆಯ ಸಂಡೂರಿನಲ್ಲಿ ಜು. 20 ರಂದು ಬಿಜೆಪಿ ಕಾರ್ಯಾಕಾರಣಿ ಸಭೆ ನಡೆಯಲಿದ್ದು, ಆ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ರಾಜ್ಯದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಬಿಜೆಪಿ ಮುಂಖಡರಾದ ಗುರುಲಿಂಗ ಗೌಡ, ವಿರುಪಾಕ್ಷಪ್ಪ, ಮಲೇಶ, ಶರಣ, ಸೋಮನಗೌಡ ಇದ್ದರು.