ರಾಯಚೂರು: ನಗರದ ಮೈಲಾರ ನಗರದಲ್ಲಿರುವ ರುದ್ರಭೂಮಿಯ ಸ್ಥಳವನ್ನು ಅತಿಕ್ರಮಣ ಮಾಡಿಕೊಂಡು ಹಾಕಲಾಗಿದ್ದ ಶೆಡ್‌ಗಳನ್ನು ನಗರಸಭೆ ಸಿಬ್ಬಂದಿ ಪೊಲೀಸರ ನೆರವಿನೊಂದಿಗೆ ಶನಿವಾರ ತೆರವುಗೊಳಿಸಿದರು.
ಮಾಜಿ ಶಾಸಕ ಎ.ಪಾಪಾರೆಡ್ಡಿ ಹೆಸರು ಹೇಳಿಕೊಂಡು ಕೆಲವರು ರುದ್ರಭೂಮಿ ಜಾಗದಲ್ಲಿ ಶೆಡ್‌ಗಳನ್ನು ನಿರ್ಮಾಣ ಮಾಡಿರುವುದನ್ನು ಬಡಾವಣೆ ಮುಖಂಡರು ನಗರಸಭೆ ಪೌರಾಯುಕ್ತರ ಗಮನಕ್ಕೆ ತಂದಿದ್ದರು. ಎಚ್ಚೆತ್ತುಕೊಂಡ ನಗರಸಭೆ ಸಿಬ್ಬಂದಿ ಅನಕೃತವಾಗಿ ಹಾಕಲಾಗಿದ್ದ ಶೆಡ್‌ಗಳನ್ನು ತೆರವುಗೊಳಿಸಿದರು.
ರುದ್ರಭೂಮಿ ಸುತ್ತ ಕಂಪೌಂಡ್ ಗೋಡೆ ನಿರ್ಮಾಣ ಮಾಡಬೇಕು. ಅತಿಕ್ರಮಣ ನಡೆಸಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮೈಲಾರ ನಗರ ನಿವಾಸಿಗಳು ಒತ್ತಾಯಿಸಿದರು. ಈ ಸಂದರ್ಭದಲ್ಲಿ ನಗರಸಭೆ ಕಂದಾಯ ಅಕಾರಿ ಮಾರೆಪ್ಪ, ಮುಖಂಡರಾದ ಪಿ.ಶ್ರೀನಿವಾಸ, ಕೆ.ಇ.ಕುಮಾರ, ಆರ್.ಬಸವರಾಜ, ಎಂ.ಮಾರೆಪ್ಪ, ಗೋವಿಂದ ನಾಯಕ, ಭೀಮೇಶ ಉಪಸ್ಥಿತರಿದ್ದರು.