ಕೊಳ್ಳೇಗಾಲ: ಹೈಕೋರ್ಟ್ ಆದೇಶದಂತೆ ಕೊಳ್ಳೇಗಾಲ ನಗರಸಭೆಗೆ ಆಡಳಿತಾಕಾರಿಯನ್ನು ನೇಮಿಸದಿರಲು ನಗರಸಭೆ ಅಧ್ಯಕ್ಷೆ ರೇಖಾ ಅವರು ಮಂಗಳವಾರ ಜಿಲ್ಲಾಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಬೆಂಗಳೂರಿನ ಹೈಕೋರ್ಟ್‌ನಲ್ಲಿ ಕೊಳ್ಳೇಗಾಲ ವಾರ್ಡ್ ನಂ.1ರ ನಗರಸಭೆ ಸದಸ್ಯೆ ಪಿ.ಎಸ್.ಕವಿತಾ ಅವರು ಕೊಳ್ಳೇಗಾಲ ನಗರಸಭೆಗೆ ಆಡಳಿತಾಕಾರಿಯನ್ನು ನೇಮಿಸದಿರುವ ಬಗ್ಗೆ ದಾವೆಯನ್ನು ಹೂಡಿದ್ದು, ಅದರಂತೆ, ನ್ಯಾಯಾಲಯ ಮುಂದಿನ ದಿನಾಂಕವನ್ನು ನಿಗದಿಪಡಿಸಲು ಆದೇಶಿಸಿರುತ್ತದೆ.
ನಾನು ಕೊಳ್ಳೇಗಾಲ ನಗರಸಭೆ ಎರಡನೇ ಅವಗೆ 2024ರ ಅ.5 ರಂದು ಅಕಾರ ವಹಿಸಿಕೊಂಡಿದ್ದು, ನನ್ನ ಎರಡನೇ ಅವಗೆ ನನಗೆ 30 ತಿಂಗಳು ಅಕಾರ ಇರುತ್ತದೆ. ಆದರೆ ನಾನು ಇದುವರೆಗೆ 14 ತಿಂಗಳು ಅಕಾರ ಮಾತ್ರ ನಡೆಸಿರುತ್ತೇನೆ. ಉಳಿದ ಅವಯಲ್ಲಿ ಆಡಳಿತಾಕಾರಿಗಳು ಅಕಾರದಲ್ಲಿ ಇರುತ್ತಾರೆ. ಹಾಗಾಗಿ ಉಳಿದ 16 ತಿಂಗಳ ಅಕಾರ ಅವಗೆ ಸಂಬಂಸಿದಂತೆ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು. ಅದರಂತೆ ನ್ಯಾಯಾಲಯ ಆಡಳಿತಾಕಾರಿಯನ್ನು ನೇಮಿಸಬಾರದೆಂದು ಆದೇಶಿಸಿರುತ್ತದೆ.
ಹಾಗಾಗಿ ಸದರಿ ಪ್ರಕರಣಕ್ಕೆ ಸಂಬಂಸಿದಂತೆ ಕೊಳ್ಳೇಗಾಲ ನಗರಸಭೆ ಕಚೇರಿಗೆ ಆಡಳಿತಾಕಾರಿಯನ್ನು ನೇಮಿಸದಂತೆ ಮನವಿ ಮಾಡುತ್ತಿದ್ದೇನೆ ಎಂದು ಡಿಸಿಗೆ ಬರೆದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.