ಸಿಂಧನೂರು: ನಗರಸಭೆಗೆ ಐವರು ಸದಸ್ಯರನ್ನು ನಾಮ ನಿರ್ದೇಶನ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆಯ ಟಿ.ಮಂಜುನಾಥ ಅ. 23ರಂದು ಆದೇಶಿಸಿದ್ದಾರೆ.
ಗರೀಬ್ ಪಾಷಾ ಹೊನ್ನೂರುಸಾಬ, ನಾಗರಾಜ ಲಾಲಸಾಬ, ಆಯುಬ್‌ಖಾನ್ ಕೆ.ಮಹ್ಮದ್ ಹುಸೇನ್, ಸಂಗೀತಾ ಸಂದೀಪ ಕುಮಾರ ಸಾರಂಗಮಠ, ಮಲ್ಲಿಕಾರ್ಜುನ ಮಾಲಿಪಾಟೀಲ್, ಈಶ್ವರ ಸಾಹುಕಾರ ಕಲ್ಲೂರು ನಾಮನಿರ್ದೇಶನಗೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.