ಬಾಗಲಕೋಟೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಆಯುಕ್ತ ಆರ್.ವಾಸಣ್ಣ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ, ಉಪಾಧ್ಯಕ್ಷೆ ಶೋಭಾ ರಾವ, ಸಭಾಪತಿ ಯಲ್ಲಪ್ಪ ನಾರಾಯಣಿ ಇತರರು ಇದ್ದರು.  
ಜಿಲ್ಲೆ

ನಗರಸಭೆ ಮಾತಿನ ಚಕಮಕಿ...!!

ಸಂತೋಷ ದೇಶಪಾಂಡೆ

ಬಾಗಲಕೋಟೆ: ನಗರಸಭೆ ಸದಸ್ಯರಿಗೆ ಆಯುಕ್ತರ ಆದಿಯಾಗಿ ಯಾವ ಅಽಕಾರಿಗಳು ಗೌರವ ನೀಡುವದಿಲ್ಲ. ಅದರಲ್ಲೂ ಹಳೇ ಬಾಗಲಕೋಟೆ ನಗರದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುವದಿಲ್ಲ. ೩೫ ವಾರ್ಡ್ಗಳು ಇದ್ದರು ಕೇವಲ ನಾಲ್ಕು ವಾರ್ಡ್ಗಳಿಗೆ ಮಾತ್ರ ಪ್ರಾಧಾನ್ಯತೆ ನೀಡಲಾಗುತ್ತಿದೆ....!!

ನಗರದ ನಗರಸಭೆ ಸಭಾಭವಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ನಗರಸಭೆ ಬಿಜೆಪಿ ಸದಸ್ಯರು ಆಯುಕ್ತ ಆರ್.ವಾಸಣ್ಣ ವಿರುದ್ಧ ಆರೋಪಗಳ ಸುರಿಮಳೆಗೈದರು. ಆರಂಭದಲ್ಲಿ ಬಿಜೆಪಿ ಸದಸ್ಯ ಸ್ಮೀತಾ ಪವಾರ ಮಾತನಾಡಿ, ವಾರ್ಡ್ನ ಸಮಸ್ಯೆ ಪರಿಹರಿಸಲು ಆಯುಕ್ತರ ಕಚೇರಿಗೆ ಹೋದರೇ ಸರಿಯಾಗಿ ಸ್ಪಂದಿಸುವದಿಲ್ಲ. ಸಾರ್ವಜನಿಕರ ಎದುರು ಅಪಮಾನ ಮಾಡಿ ಮಾತನಾಡುತ್ತಾರೆ. ನಾವೇನು ನಮ್ಮ ವೈಯಕ್ತಿಕ ಕೆಲಸಕ್ಕೆ ಹೋಗಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಬಿಜೆಪಿ ಬಹುತೇಕ ಸದಸ್ಯರು ಧ್ವನಿಗೂಡಿಸಿದರು. ಆಯುಕ್ತರ ನಡೆ ಬಗ್ಗೆ ಅಸಮಾಧಾನ ಹೊರ ಹಾಕಿದರು.

ಮಧ್ಯ ಪ್ರವೇಶ ಮಾಡಿದ ನಗರಸಭೆ ಸಭಾಪತಿ ಯಲ್ಲಪ್ಪ ನಾರಾಯಣಿ ಬಿಜೆಪಿ ಸದಸ್ಯರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಸದಸ್ಯೆ ಸ್ಮೀತಾ ಪವಾರ ನಿಮ್ಮಿಂದ ಏನೂ ಆಗುವುದಿಲ್ಲ ನೀವು ಸುಮ್ಮನೇ ಕೂಡಿ ಎಂದು ಆಕ್ರೋಶ ಹೊರಹಾಕಿದರು.

ಇನ್ನೂ ಪಕ್ಕದಲ್ಲೇ ಇದ್ದ ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷೆಯೂ ಕೂಡ ಸದಸ್ಯರಿಗೆ ಈ ರೀತಿ ಮಾಡವುದು ತಪ್ಪು ಎಂದು ಯಾವುದೇ ಒಂದು ಮಾತು ಕೂಡ ಪ್ರಸ್ತಾಪಿಸಲಿಲ್ಲ. ಸದಸ್ಯರಿಗೆ ಗೌರವ ಕೊಡುವ ಕೆಲಸ ಮಾಡಬೇಕು ಎಂದು ಅಧ್ಯಕ್ಷೆ ಹೇಳಿ ಸುಮ್ಮನಾದರು.

ಬಿಜೆಪಿ ಸದಸ್ಯ ಶ್ರೀನಾಥ ಸಜ್ಜನ್ ಮಾತನಾಡಿ, ನಗರದಲ್ಲಿ ೩೫ ವಾರ್ಡಗಳು ಇದ್ದರೂ ಕೂಡಾ ನಾಲ್ಕು ವಾರ್ಡ್ಗಳಿಗೆ ಮಾತ್ರ ಅನುದಾನ ಹಂಚಿಕೆ ಮಾಡಲಾಗುತ್ತಿದೆ. ಲಕ್ಷಾಂತರ ಅನುದಾನ ಬಂದರು ಕೆಲವೇ ವಾರ್ಡ್ಗಳಿಗೆ ಮಾತ್ರ ಸಿಮೀತವಾಗಿದೆ. ಅವುಗಳಿಗೆ ಮಾತ್ರ ಟೆಂಟರ ಕರೆಯುವುದು ನೋಡಿದರೇ ಅನುಮಾನ ಮೂಡುತ್ತಿದೆ. ಯಾವ ಉದ್ದೇಶ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೀರಿ ಎಂದು ಆಯುಕ್ತರ ವಿರುದ್ಧ ದೂರಿದರು.

ಮತ್ತೆ ಸದಸ್ಯರ ಪ್ರಶ್ನೆಗೆ ಉತ್ತರ ನೀಡಿದ ಆಯುಕ್ತ ಆರ್.ವಾಸಣ್ಣ, ಶಾಸಕರ ನಿರ್ದೇಶನದ ಮೇರೆಗೆ ಎಲ್ಲಿ ಯುಜಿಡಿ,ಗಟಾರು,ರಸ್ತೆ ಸಮಸ್ಯೆ ಇದೆ ಅದನ್ನು ಗಮನಿಸಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದು ಹೇಳುತ್ತಿದ್ದಂತೆ ಮತ್ತಷ್ಟು ಕುಪಿತಗೊಂಡ ಬಿಜೆಪಿ ಸದಸ್ಯರು ಉಳಿದ ವಾರ್ಡಿನಲ್ಲಿ ಯಾವ ಸಮಸ್ಯೆ ಇಲ್ಲವೇ ಎಂದು ವಾಗ್ವಾದ ನಡೆಸಿದರು.

ಬಿಜೆಪಿ ಸದಸ್ಯೆ ಶಶಿಕಲಾ ಮಜ್ಜಗಿ, ಕಳೆದ ೬ ವರ್ಷಗಳಿಂದ ನಮ್ಮ ವಾರ್ಡಿಗೆ ಅಂಗನವಾಡಿ ಕೇಂದ್ರ ಕೊಡಿ ಎಂದು ಕೇಳಿಕೊಂಡರೂ ನಮ್ಮ ಅವಽ ಪೂರ್ಣಗೊಳ್ಳುತ್ತಾ ಬಂದರು ಜಾರಿಗೊಂಡಿಲ್ಲ. ಮಕ್ಕಳು ಎಲ್ಲಿ ಓದಬೇಕು. ಯಾಕೆ ಕೊಡುತ್ತಿಲ್ಲ ಎಂದು ಅಽಕಾರಿಗಳ ವಿರುದ್ಧ ಹರಿಹಾಯ್ದರು.

ನಗರ ಆಶ್ರಯ ಯೋಜನೆಯಡಿ ಈ ಹಿಂದೆ ಮನೆಗಳನ್ನು ಪಡೆದ ಫಲಾನುಭವಿಗಳು ಮೃತರಾಗಿದ್ದು ಅವರ ನೇರ ವಾರಸುದಾರ ಹೆಸರಿಗೆ ಬದಲಾವಣೆ ಮಾಡಲು ಜಿಲ್ಲಾಽಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವುದು. ಕರ್ನಾಟಕ ಪುರಸಭೆ ಅಽನಿಯಮ ಕಾಯ್ದೆ -೧೯೬೪ರ ಕಲಂ ೨೫೬ ರ ಪ್ರಕಾರ ವ್ಯಾಪಾರ ಪರವಾನಿಗೆ ಶುಲ್ಕ ನಿಗದಿ ಪಡಿಸುವುದು. ಅಮೃತ ಯೋಜನೆಯಡಿ ನಿರ್ವಹಿಸಿರುವ ನೀರು ಸರಬರಾಜು ಜೋಡಣೆಗಳಿಗ ನೀರಿನ ದರಗಳನ್ನು ನಿಗದಿ ಪಡಿಸುವುದು. ಅಮೃತ ಯೋಜನೆಯ ಮೂಲ ಅನುದಾನದಡಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿAದ ನಿರ್ವಹಿಸಿರುವ ನೀರು ಸರಬರಾಜು ಕಾಮಗಾರಿಯ ನಿರ್ವಹಣೆಯನ್ನು ೫ ವರ್ಷದ ಅವಽಗೆ ಒಡಂಬಡಿಕೆ ಮಾಡಿಕೊಳ್ಳುವುದು ಸೇರಿದಂತೆ ಇನ್ನಿತರ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆದುಕೊಳ್ಳಲಾಯಿತು.

ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ, ಉಪಾಧ್ಯಕ್ಷ ಶೋಭಾ ರಾವ, ಸಭಾಪತಿ ಯಲ್ಲಪ್ಪ ನಾರಾಯಣಿ, ಸದಸ್ಯರಾದ ವಿ.ವಿ.ಶಿರಗಣ್ಣವರ, ಸ್ಮೀತಾ ಕಲಬುರ್ಗಿ, ಸಾಗರ ಬಂಡಿ, ಬಸವರಾಜ ಅವರಾದಿ, ಹಾಜಿಸಾಬ ದಂಡಿ, ಚನ್ನವೀರ ಅಂಗಡಿ ಇತರರು ಇದ್ದರು.