b.m.mubharak 
ಜಿಲ್ಲೆ

ನಗರಸಭೆ ಮಾಜಿ ಅಧ್ಯಕ್ಷ ಮುಭಾರಕ್‌ಗೆ ಜಾಮೀನು

Webdesk - Narayanaswamy

ಕೋಲಾರ ಅಧಿಕಾರಿಯೊಬ್ಬರ ವರ್ಗಾವಣೆ ಮಾಡಿಸುವುದಕ್ಕೆ ೧.೫ಕೋಟಿ ರೂ.ಗೆ ಬೇಡಿಕೆಯಿಟ್ಟು, ೨೫ಲಕ್ಷ ರೂ.ಪಡೆದು ವಂಚಿಸಿದ ಆರೋಪದ ಮೇಲೆ ಕೋಲಾರ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಿ.ಎಂ.ಮುಬಾಕರ್‌ರನ್ನು ಪೊಲೀಸರು ಸೋಮವಾರ ಬಂಧಿಸಿದ್ದು, ಮಂಗಳವಾರ ನಗರದ ೨ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
ಗುತ್ತಿಗೆದಾರ ಬೆಂಗಳೂರಿನ ಬಿ.ಎನ್.ಪ್ರತಾಪ್ ಎಂಬುವರು ತಮಗೆ ವಂಚನೆ ಆಗಿರುವ ಬಗ್ಗೆ ನಗರದ ಗಲ್‌ಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಬಾರಕ್‌ರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ಆಡುಗೋಡಿ ಪೊಲೀಸ್ ಠಾಣೆಗೆ ಆಯುಧ ತರಬೇತಿಗೆ ತೆರಳಿದ್ದಾಗ ಕೋಲಾರದ ಪಿರ್‌ಸೈಯದ್ ಖಾದರ್ ಅಲಿ ಎಂಬಾತ ಪರಿಚಯವಾಗಿ, ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಿಕೊಡಲು ಕೇಳಿದ್ದೆ. ಅವರ ಮೂಲಕ ಮುಬಾರಕ್ ಪರಿಚಯವಾಗಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಎಂಎಲ್‌ಸಿ ನಸೀರ್ ಅಹ್ಮದ್ ಬಳಿ ಮಾತನಾಡಿ ವರ್ಗಾವಣೆ ಮಾಡಿಕೊಡುವುದಾಗಿ ಮುಬಾರಕ್ ನಂಬಿಸಿದ್ದರು.
ಬಳಿಕ ಜೂ.೨೯ರಂದು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ಕರೆಯಿಸಿಕೊಂಡು ೧.೫ ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ ೨೫ಲಕ್ಷ ರೂ., ಜು.೨ರಂದು ೨೫ಲಕ್ಷ ರೂ., ಜು.೨೨ರಂದು ಕೋಲಾರದ ನಾಗಾರ್ಜುನ ಹೋಟೆಲ್‌ನಲ್ಲಿ ೫೦ಲಕ್ಷ ರೂ. ಪಡೆದಿದ್ದರು. ಸೈಯದ್ ಖಾದರ್ ಅಲಿ ಅವರಿಗೆ ೯ಲಕ್ಷ ನಗದು ನೀಡಲಾಗಿತ್ತು. ವರ್ಗಾವಣೆ ಆಗದ ಕಾರಣ ಹಣ ವಾಪಸ್ ಕೇಳಿದ್ದು, ಮುಬಾರಕ್ ಹಣ ಕೊಡದೆ ಬೆದರಿಕೆ ಹಾಕಿದ್ದಾರೆ.
ಅಷ್ಟೇ ಅಲ್ಲ, ಜೂ.೨೬ರಮದು ಮಾಲೂರು ಶಾಸಕ ಕೆ.ವೈ.ನಂಜೇಗೌಡರನ್ನು ಅವರ ಮನೆಯಲ್ಲಿ ಭೇಟಿ ಮಾಡಿಸಿದ್ದು, ಕೋಲಾರ ಹಾಲು ಒಕ್ಕೂಟದಲ್ಲಿ ಗುತ್ತಿಗೆ ಕೊಡಿಸುವುದಾಗಿ ತಿಳಿಸಿ, ಅವರು ಇದಕ್ಕೆ ೨೫ಲಕ್ಷ ರೂ.ಕೇಳುತ್ತಿದ್ದಾರೆಂದು ತಿಳಿಸಿದ್ದರು. ಇದಕ್ಕೆಲ್ಲ ಮೊಬೈಲ್ ಸಂಭಾಷಣೆ ಮತ್ತು ವ್ಯಾಟ್ಸಾö್ಯಪ್ ಸಂದೇಶ ರವಾನಿಸಿರುವ ಬಗ್ಗೆ ದಾಖಲೆಯಿದ್ದು, ಸೂಕ್ತ ಕ್ರಮ ಜರುಗಿಸಬೇಕೆಂದು ಪ್ರತಾಪ್ ದೂರಿನಲ್ಲಿ ತಿಳಿಸಿದ್ದರು.
ಅದರಂತೆ ಐಪಿಸಿ ೧೮೬೦(ಯು\ಎಸ್ ೪೧೯, ೪೨೦, ೪೬೫, ೪೬೮, ೪೭೧, ೫೦೪, ೫೦೬, ೩೪) ಮಾಹಿತಿ ತಂತ್ರಜ್ಞಾನ ಕಾಯ್ದೆ ೨೦೦೮(ಯು\ಎಸ್ ೬೬ಸಿ, ೬೬ಡಿ)ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.