ಚಾಮರಾಜನಗರ: ಚಾಮರಾಜನಗರ ನಗರಸಭೆ ಆಯುಕ್ತ ಎಸ್.ವಿ.ರಾಮದಾಸ್ ವಿರುದ್ಧ ದೂರಗಳು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ರಚಿಸಿ ತನಿಖೆ ಮಾಡಲು ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶಿಸಿದ್ದಾರೆ.
ಈ ಸಂಬಂಧ ೆ.14ರಂದು ಆದೇಶ ಹೊರಡಿಸಿರುವ ಡಿಸಿ ಶಿಲ್ಪಾನಾಗ್, ನಗರಸಭೆಗೆ ಸಂಬಂಧಿಸಿದಂತೆ ಖಾತೆ ಹಾಗೂ ಸರ್ಕಾರಿ ಜಾಗಗಳನ್ನು ಖಾಸಗಿಯವರಿಗೆ ಖಾತೆ ಮಾಡಿ, ಯಾರದೋ ಆಸ್ತಿಯನ್ನು ಮತ್ಯಾರ ಹೆಸರಿಗೋ ಖಾತೆ ಮಾಡುವುದು, ಹಲವು ಅಕ್ರಮ ಖಾತೆಗಳು, ಸರ್ವೆ ನಂಬರ್‌ಗಳನ್ನು ಖಾತೆ ಮಾಡುತ್ತಿರುವ ಬಗ್ಗೆ, ಕಡಿಮೆ ಕಂದಾಯ ನಿಗದಿಪಡಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟವುಂಟು ಮಾಡಿರುವುದರ ಬಗ್ಗೆ ಜಿಲ್ಲಾಡಳಿತಕ್ಕೆ ದೂರುಗಳು ಸ್ವೀಕೃತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪೌರಾಯುಕ್ತ ರಾಮದಾಸ್ ಅವಧಿಯಲ್ಲಿನ ಎಲ್ಲ ಶಾಖೆಗಳ ಕಡತ ಮತ್ತು ದಾಖಲಾತಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಮೇಜು ತಪಾಸಣೆಯೊಂದಿಗೆ ಸಮಗ್ರ ತನಿಖೆ ನಡೆಸಿ, 15 ದಿನಗಳ ಒಳಗಾಗಿ ತನಿಖಾ ವರದಿಯನ್ನು ನೀಡಲು ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜಿನಿಯರ್ ಅಲ್ತ್ಾ ಅಹಮದ್, ಕೊಳ್ಳೇಗಾಲ ನಗರಸಭೆ ಲೆಕ್ಕಾಧೀಕ್ಷಕ ಕೆ.ಆರ್.ಹನುಮಂತರಾಜು, ಗುಂಡ್ಲುಪೇಟೆ ಪುರಸಭೆ ಕಂದಾಯಾಧಿಕಾರಿ ಸವಿತಾ, ಪುರಸಭೆ ಕಿರಿಯ ಇಂಜಿನಿಯರ್ ಅನುಪಮ ಅವರನ್ನು ನಿಯೋಜಿಸಿ ಆದೇಶ ಹೊರಡಿಸಿದ್ದಾರೆ.