ಹಾಸನ: ಈ ಮೊದಲು ಅವರಿಗೆ ಎಂ.ಚಂದ್ರೇಗೌಡ ಅವರಿಗೆ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರಿಸೈನ್ ಮಾಡುವಂತೆ ಸೂಚಿಸಲಾಗಿತ್ತು. ನೀಡದ ಕಾರಣ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗುವುದು. ರಾಜೀನಾಮೆ ಕೊಡದೇ ಇದ್ದರೆ ಇಳಿಸುವುದು ಗೊತ್ತಿದೆ ಎಂದು ಎಚ್.ಡಿ. ರೇವಣ್ಣ ಗುಡುಗಿದರು.
ನಗರದ ಡೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇವಣ್ಣ ಅವರು, ನಾನು 40 ವರ್ಷ ರಾಜಕೀಯ ಮಾಡಿದ್ದೇನೆ. ಆ ಮನುಷ್ಯನಿಗೆ ಗೌರವ ಇಲ್ಲ, 6 ತಿಂಗಳಿಗೆ ರಾಜೀನಾಮೆ ನೀಡಬೇಕು ಎಂದು ಮೊದಲು ನನಗೆ ಯಾರೂ ಹೇಳಿರಲಿಲ್ಲ ಎಂದು ದೇವರ ಮುಂದೆ ಆಣೆ ಮಾಡಲಿ, ಧಿಮಾಕು ಇದ್ರೆ ಅವರ ಮನೆಯಲ್ಲಿ ಇಟ್ಟುಕೊಳ್ಳಲಿ, ಸ್ಥಳೀಯ ಶಾಸಕರ ಕಾರಣಕ್ಕೆ ನಾನು ಇಷ್ಟು ದಿನ ಸುಮ್ಮನಿದ್ದೆ, ಮುಂದೆ ಕಾನೂನು ಪ್ರಕಾರ ಏನು ಮಾಡಬೇಕು ಗೊತ್ತಿದೆ ಎಂದರು.