ಜಿಲ್ಲೆ

ನಗರದಲ್ಲಿ ಮೂರು ಪ್ರತ್ಯೇಕ ಬೈಕ್ ಕಳ್ಳತನ

ಬೆಳಗಾವಿ: ನಗರದ ಪ್ರತ್ಯೇಕ ಸ್ಥಳಗಳಲ್ಲಿ ಮೂರು ಬೈಕ್ ಕಳ್ಳತನವಾದ ಘಟನೆ ನಡೆದಿವೆ.

ಇಲ್ಲಿನ ವಡಗಾವಿ ನಿವಾಸಿ ಸಂಜಯ ಭಿಕಾಜಿರಾವ ದೇಸಾಯಿ ಅವರ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಡಿ.9 ರಂದು ಕಳ್ಳತನವಾಗಿದೆ. ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾರುತಿ ನಗರದ ನಿವಾಸಿ ಭಾವೇಶ ಪೋರವಾಲ್ ಸಾಳ ಎಂಬುವರಿಗೆ ಸೇರಿದ್ದ ಬೈಕ್‌ನ್ನು ಕೇಂದ್ರ ಬಸ್ ನಿಲ್ದಾಣದ ಬಳಿ ಡಿ.10 ರಂದು ಕಳ್ಳತನ ಮಾಡಲಾಗಿದೆ.

ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ಮುತಗಾ ಗ್ರಾಮದ ನಿವಾಸಿ ಪಾಂಡುರಂಗ ದ್ಯಾನೇಶ್ವರ ಗಾವಡೆ ಅವರ ಬೈಕ್ ಅನ್ನು ನಗರದ ಸಂತೋಷ-ನಿರ್ಮಲ ಚಿತ್ರಮಂದಿರದ ಬಳಿ ಡಿ.20 ರಂದು ಕಳ್ಳತನವಾಗಿದೆ. ಈ ಕುರಿತು ಖಡೆಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.