ಹಾಸನ: ನಗರದಲ್ಲಿ ಬಿಡಾಡಿ ದನಗಳ ಹೆಚ್ಚಾಗಿದ್ದು, ಬೀದಿಗಳಲ್ಲಿ ದನಗಳು ಹಿಂಡು ಹಿಂಡಾಗಿ ರಸ್ತೆಯಲ್ಲಿ ಮಲಗಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದರು ನಗರಸಭೆಯವರು ಮಾತ್ರ ನಿರ್ಲಕ್ಷೃ ವಹಿಸದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಿ.ಎಂ.ರಸ್ತೆ,ಸಂತೆಪೇಟೆ,ಸಾಲಗಾಮೆ ರಸ್ತೆ, ಸೇರಿದಂತೆ ಇತರೆ ಕಡೆ ಬಿಡಾಡಿ ದನಗಳು ರಾಜಾರೋಷವಾಗಿ ರಸ್ತೆ ಮಧ್ಯೆದಲ್ಲಿಯೇ ಓಡಾಡುತ್ತಿರುತ್ತದೆ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ನಿತ್ಯ ಪರದಾಡುತ್ತಿದ್ದಾರೆ. ಆದರೆ, ಸಂಬಂಧಪಟ್ಟ ನಗರಸಭೆ ತಮಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ಕಣ್ಣು ಮುಚ್ಚಿ ಕುಳಿತಿದೆ ಎಂಬುದು ಜನರ ಕಿಡಿಕಾರಿದರು.
ಬಿಡಾಡಿ ದನಗಳಿಂದ ಚಾಲಕರಿಗೆ ಅವುಗಳಿಂದ ತಪ್ಪಿಸಿಕೊಂಡು ಚಾಲನೆ ಮಾಡುವುದೇ ದೊಡ್ಡ ಸಮಸ್ಯೆ. ಬೀದಿ ಬದಿ ವ್ಯಾಪಾರಕ್ಕೂ ಕಷ್ಟ: ರಸ್ತೆ ಪಕ್ಕದಲ್ಲಿ ಹಣ್ಣು, ಹಂಪಲು, ತರಕಾರಿ ಮಾರಾಟಕ್ಕೂ ದನಗಳಿಂದ ಸಮಸ್ಯೆ ಉಂಟಾಗುತ್ತಿದೆ. ನಿತ್ಯವೂ ನಗರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗುತ್ತಲೇ ಇರುತ್ತದೆ. ಆದರೆ, ನಗರಸಭೆ ಮಾತ್ರ ಆಗೊಮ್ಮೆ ಈಗೊಮ್ಮೆ ಪ್ರಕಟಣೆ ನೀಡುವ ಕೆಲಸ ಮಾಡುತ್ತದೆಯೇ ಹೊರತು ಇತರೆ ಕ್ರಮವನ್ನು ಕೈಗೊಂಡಿಲ್ಲ. ಸಂಬಂಧಪಟ್ಟವರು ಇದರತ್ತ ಗಮನ ಹರಿಸುವ ಅಗತ್ಯವಿದೆ. ಇಲ್ಲದಿದ್ದಲ್ಲಿ ಮುಂದೆ ಹೆಚ್ಚಿನ ಅಪಾಯವುಂಟಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಜನರು ದೂರಿದರು.