ನಗರದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡುವಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಲಾರಿ ಮಾಲೀಕರ ಸಂಘದಿಂದ ಸೋಮವಾರ ಮನವಿ ಸಲ್ಲಿಸಲಾಯಿತು. ಕಾರ್ಖಾನೆ ಮಾಲೀಕರ ಸಂಘದ ಅಧ್ಯಕ್ಷ ವಿ.ಲಕ್ಷ್ಮಿರೆಡ್ಡಿ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಹಸನ್, ಗೌರವಾಧ್ಯಕ್ಷ ನಾಗರಾಜ ಬಾಲಚೇಡ್, ಪದಾಕಾರಿಗಳಾದ ಅಜೀಂ ಪಾಷಾ, ಮಹ್ಮದ್ ಎಜಾಜುದ್ದೀನ್, ಅಹ್ಮದ್ ರಹೀಜ್ ಇದ್ದರು. 
ಜಿಲ್ಲೆ

ನಗರದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಿ

ರಾಯಚೂರು: ನಗರದಲ್ಲಿ ಲಾರಿ ಸೇರಿದಂತೆ ಭಾರಿ ವಾಹನಗಳ ನಿಲುಗಡೆಗೆ ಹೆಚ್ಚಿನ ತೊಂದರೆಯಾಗುತ್ತಿದ್ದು, ವಾಹನಗಳ ನಿಲುಗಡೆಗೆ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಬೇಕು ಎಂದು ಲಾರಿ ಮಾಲೀಕರ ಸಂಘದಿಂದ ಸ್ಥಳೀಯ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ನಗರಕ್ಕೆ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಲಾರಿ ಆಗಮಿಸುತ್ತಿದ್ದು, ಸರಕು ಇಳಿಸಲು, ಏರಿಸಲು ರಸ್ತೆ ಅಕ್ಕಪಕ್ಕದಲ್ಲಿ ಲಾರಿಗಳನ್ನು ನಿಲ್ಲಿಸುತ್ತಿರುವುದರಿಂದ ಜನರಿಗೆ ಹಾಗೂ ಚಾಲಕರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.
ರಸ್ತೆ ಪಕ್ಕ ನಿಲ್ಲಿಸುವ ಲಾರಿಗಳ ಟೈರ್, ಬ್ಯಾಟರಿ ಹಾಗೂ ಬಿಡಿ ಭಾಗಗಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ದೂರು ಸಲ್ಲಿಸಿದರೂ ಯವುದೇ ಕ್ರಮಕೈಗೊಳ್ಳಲಾಗುತ್ತಿಲ್ಲ. ಬೇರೆಡೆಯಿಂದ ನಗರಕ್ಕೆ ಬಂದ ಭಾರಿ ವಾಹನಗಳಿಗೆ ನಿಲ್ಲಿಸಲು ಸ್ಥಳವಿಲ್ಲದಂತ ಸ್ಥಿತಿಯಿದೆ.
ನಗರದಲ್ಲಿ ಕನಿಷ್ಠ 15 ಎಕರೆಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡುವ ಮೂಲಕ ಲಾರಿ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ಇದರಿಂದ ಸಾರ್ವಜನಿಕರು, ಚಾಲಕರು ಮತ್ತು ಲಾರಿ ಮಾಲೀಕರಿಗೆ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಕಾರ್ಖಾನೆ ಮಾಲೀಕರ ಸಂಘದ ಅಧ್ಯಕ್ಷ ವಿ.ಲಕ್ಷ್ಮಿರೆಡ್ಡಿ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಹಸನ್, ಗೌರವಾಧ್ಯಕ್ಷ ನಾಗರಾಜ ಬಾಲಚೇಡ್, ಪದಾಕಾರಿಗಳಾದ ಅಜೀಂ ಪಾಷಾ, ಮಹ್ಮದ್ ಎಜಾಜುದ್ದೀನ್, ಅಹ್ಮದ್ ರಹೀಜ್ ಪಾಲ್ಗೊಂಡಿದ್ದರು.