ಜಿಲ್ಲೆ

ನಗರದಲ್ಲಿ ಅಪರಿಚಿತ ವೃದ್ದೆ ಸಾವು

ಚಾಮರಾಜನಗರ: ಕಮಲಮ್ಮ ಎಂಬ ಅಪರಿಚಿತ ವೃದ್ದ ಮಹಿಳೆಯೊಬ್ಬರು ನಗರದ ಚಾಮರಾಜನಗರ ವೈದ್ಯಕೀಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇವರ ವಾರಸುದಾರರ ಪತ್ತೆಗೆ ಸಹಕರಿಸುವಂತೆ ಮನವಿ‌ ಮಾಡಲಾಗಿದೆ.

ಸುಮಾರು 70 ರಿಂದ 75 ವಯಸ್ಸಿನ ವೃದ್ದೆಯಾಗಿರುವ ಕಮಲಮ್ಮ ಕಳೆದ ಡಿಸೆಂಬರ್ 12 ರಂದು ರಾತ್ರಿ 11.30 ರ ಸಮಯದಲ್ಲಿ ನಗರದ ಬಿ.ರಾಚಯ್ಯ ಜೋಡಿ ರಸ್ತೆಯ ಟಿ.ವಿ.ಎಸ್. ಷೋರೂಮ್ ಬಳಿ ಅನಾರೋಗ್ಯದಿಂದ ಬಿದ್ದಿರುವುದು ಕಂಡು ಬಂದಿತ್ತು.ಇವರನ್ನು ಚಿಕಿತ್ಸೆಗಾಗಿ ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಇಂದು ಬೆಳಿಗ್ಗೆ 7.30 ರ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾದೆ ಮೃತ ಪಟ್ಟಿದ್ದಾರೆ.

ಸದರಿಯವರು ತಮ್ಮ ಹೆಸರು ಕಮಲಮ್ಮ ಎಂದು ಮಾತ್ರ ತಿಳಿಸಿದ್ದು ವಿಳಾಸ ಮತ್ತು ವಾರಸುದಾರರು ಪತ್ತೆಯಾಗಿಲ್ಲ. ಮೃತ ಕಮಲಮ್ಮ ಅವರು ಬಡಕಲು ದೇಹ,ಕೋಲು ಮುಖ ಹೊಂದಿದ್ದು‌ ಎಣ್ಣೆಗೆಂಪು ಬಣ್ಣ,ಬಿಳಿ ಮತ್ತು ಕಪ್ಪು ಮಿಶ್ರಿತ ತಲೆಗೂದಲು ಹೊಂದಿದ್ದು 5 ಅಡಿ ಎತ್ತರವಿರುತ್ತಾರೆ. ಕೆಂಪು ಬಣ್ಣದ ಬಿಳಿ ಹೂ ಇರುವ ನೈಟಿ ಧರಿಸಿರುತ್ತಾರೆ.

ಶವವನ್ನು ಸಿಮ್ಸ್ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ ಇವರ ವಾರಸುದಾರರು ಇದ್ದಲ್ಲಿ ಚಾಮರಾಜನಗರ ಪಟ್ಟಣದ ಪೊಲೀಸ್ ಠಾಣೆ ಅಥವಾ ದೂರವಾಣಿ ಸಂಖ್ಯೆ 08226-222047 ಸಂಪರ್ಕಿಸುವಂತೆ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.