ಜಿಲ್ಲೆ

ನಗರದ ಹಲವೆಡೆ ಕಾರ್ಗಿಲ್ ವಿಜಯೋತ್ಸವ

ಚಿತ್ರದುರ್ಗ: ನಗರದ ಡಾನ್‌ಬಾಸ್ಕೋ ಐಸಿಎಸ್‌ಇ ಶಾಲೆಯ ಎನ್‌ಸಿಸಿ ವಿದ್ಯಾರ್ಥಿಗಳು ಕಾರ್ಗಿಲ್ ವಿಜಯೋತ್ಸವದ ರಜತ ಮಹೋತ್ಸವವನ್ನು ಯೋಧರ ಸವಿನೆನಪಿಗಾಗಿ ಗಿಡ ನೆಡುವ ಮೂಲಕ ಆಚರಿಸಿದರು. ಪ್ರಾಚಾರ್ಯ ಫಾದರ್ ಕೆ.ಸಿ.ಮ್ಯಾಥ್ಯೂ, ಎನ್‌ಸಿಸಿ ಅಧಿಕಾರಿ ವಿನಯ್‌ಕುಮಾರ್, ಶಿಕ್ಷಕರಾದ ಪುಷ್ಪರಾಜ್, ಮನೋಹರ್, ಲೋಬೋ ಇತರರಿದ್ದರು.

ಯುವ ಬ್ರಿಗೇಡ್‌: ಕಾರ್ಗಿಲ್ ವಿಜಯೋತ್ಸವ ರಜತ ಮಹೋತ್ಸವದ ಸಂಭ್ರಮಾಚರಣೆಯನ್ನು ಯುವ ಬ್ರಿಗೇಡ್‌ನಿಂದ ವಾಸವಿ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಆಚರಿಸಲಾಯಿತು. ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಎ.ಸತ್ಯನಾರಾಯಣಶೆಟ್ಟಿ, ಕಾರ್ಯದರ್ಶಿ ಎಲ್.ಎನ್.ಅಜಯಕುಮಾರ್, ಸಹ ಕಾರ್ಯದರ್ಶಿ ಎಂ.ಗಿರೀಶ್, ಖಜಾಂಚಿ ಎಚ್.ಕೆ.ವಿಶ್ವನಾಥ್ ಇತರರಿದ್ದರು.

ಎಬಿವಿಪಿ: ಕಾರ್ಗಿಲ್ ರಜತ ಮಹೋತ್ಸವದ ಅಂಗವಾಗಿ ವಿಜಯ ದಿವಸ್ ಕಾರ್ಯಕ್ರಮವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ನಗರದ ಎಸ್.ಎಸ್.ಚೈತನ್ಯ ವೃತ್ತದಲ್ಲಿ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಶುಕ್ರವಾರ ಆಚರಿಸಲಾಯಿತು. ರಾಜ್ಯ ಕಾರ್ಯಕಾರಣಿ ಸದಸ್ಯ ಕನಕರಾಜ್ ಕೋಡಿಹಳ್ಳಿ, ನಗರ ಕಾರ್ಯದರ್ಶಿ ಗೋಪಿ, ಕಾರ್ಯಕರ್ತರಾದ ಚಿತ್ತಸ್ವಾಮಿ, ಸಂಜಯ್, ಕಾರ್ತಿಕ್, ಸುದೀಪ್, ಚೈತ್ರಾ, ದರ್ಶನ್ ಇತರರಿದ್ದರು.

ಕೆಎಸ್‌ಆರ್‌ಟಿಸಿ ನೌಕರರು: ನಗರದ ವೀರ ಯೋಧ ಚೈತನ್ಯ ವೃತ್ತದಲ್ಲಿ ಕೆಎಸ್‌ಆರ್‌ಟಿಸಿ ನೌಕರರು ಕಾರ್ಗಿಲ್ ವಿಜಯೋತ್ಸವ ರಜತ ಮಹೋತ್ಸವವನ್ನು ಚೈತನ್ಯ ಅವರಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಿದರು.