ಯಾದಗಿರಿ: ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ೩೧ ವಾರ್ಡ್ಗಳುಳ್ಳ ನಗರಸಭೆ ನೂರಕ್ಕೂ ಅಧಿಕ ಸಮಸ್ಯೆ ಹೊತ್ತಿದ್ದು, ಶುಕ್ರವಾರ ನಡೆಯುವ ಕೆಡಿಪಿ ಸಭೆಯಲ್ಲಿ ಈ ಎಲ್ಲ ಸಮಸ್ಯೆಗೆ ಪರಿಹಾರ ಸಿಗುವುದೇ ಎಂಬುದು ಕಾದು ನೋಡಬೇಕಾಗಿದೆ.
ಮುಖ್ಯವಾಗಿ ನಗರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಆಯುಕ್ತರೇ ಇಲ್ಲದ ಕಾರಣ ಒಂದಿಲ್ಲೊAದು ಸಮಸ್ಯೆಯನ್ನು ನಗರದ ಜನತೆಗೆ ಕಾಡಲಾರಂಭಿಸಿವೆ. ಶುದ್ಧ ಕುಡಿಯುವ ನೀರು, ಬೀದಿ ದೀಪಗಳ ಕೊರತೆ, ಸುಗಮ ಸಂಚಾರಕ್ಕೆ ವಿಘ್ನ, ಪದೇ ಪದೆ ಕೈಕೊಡುವ ವಿದ್ಯುತ್, ಎಲ್ಲೆಂದರಲ್ಲಿ ಬಾಯಿ ತೆರೆದಿರುವ ವಿದ್ಯುತ್ ತಂತಿಗಳು, ಹದಗೆಟ್ಟ ರಸ್ತೆ, ಹೂಳು ತುಂಬಿದ ಚರಂಡಿಗಳು, ಬಿಡಾಡಿ ದನಗಳ ಹಾವಳಿ ಸೇರಿ ಹೀಗೆ ಅನೇಕ ಸಮಸ್ಯೆಗಳಿಗೆ ಶಾಸಕರು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.ಮಳೆಗಾಲ ಆರಂಭವಾಗಿ ತಿಂಗಳಾದರೂ ನಗರದಲ್ಲಿ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ. ಸಮರ್ಪಕ ಬೀದಿ ದೀಪ ಇಲ್ಲದ ಕಾರಣ ಸಂಜೆಯಾದರೆ ಸಾಕು ಅರ್ಧ ನಗರ ಕತ್ತಲಲ್ಲಿ ಮುಳುಗುತ್ತದೆ. ಕೆಲ ಪ್ರತಿಷ್ಠಿತ ಬಡಾವಣೆಗಳು ಸಹ ಸ್ಲಮ್ ಏರಿಯಾದಂತೆ ಕಂಗೊಳಿಸುತ್ತಿವೆ. ನಗರದ ಪ್ರಮುಖ ರಸ್ತೆ ಬೀಡಾಡಿ ದನ-ಕರುಗಳು ಆಕ್ರಮಿಸಿಕೊಳ್ಳುತ್ತಿವೆ. ರಸ್ತೆ ನಡುವೆ ನಿಲ್ಲುವುದು, ಮಲಗುವುದರಿಂದ ವಾಹನ ಸವಾರರಿಗೆ ತೀವ್ರ ಸಮಸ್ಯೆ ತಂದೊಡ್ಡಿದೆ.
ನಗರದ ಮುಖ್ಯ ರಸ್ತೆ ಸೇರಿ ಅನೇಕ ಬಡಾವಣೆಗಳಲ್ಲಿರುವ ವಿದ್ಯುತ್ ಕಂಬಗಳಿಗೆ ಜೋಡಿಸಿರುವ ವೈರ್‌ಗಳು ಗಾಳಿಗೆ ತೂರಾಡುತ್ತಿವೆ. ಅನೇಕ ಕಡೆ ಕಟ್ಟಡಗಳ ಮತ್ತು ಮರಗಳ ಮೇಲೆ ಈ ತಂತಿ ಬಿದ್ದಿದ್ದು, ಜೀವಕ್ಕೆ ಅಪಾಯವಿದ್ದರೂ ಜೆಸ್ಕಾಂ ಅಧಿಕಾರಿಗಳು ನಿರ್ಲಕ್ಷÈವಹಿಸಿದ್ದಾರೆ. ಇನ್ನೂ ವಾಹನಗಳ ಸಂಚಾರಕ್ಕೆ ನಿಯಮ ಪಾಲಿಸುವವರು ತೀರಾ ವಿರಳ. ಮುಖ್ಯ ರಸ್ತೆಯನ್ನೊಂದು ಕಾರ್, ಜೀಪ್, ದ್ವಿಚಕ್ರ ವಾಹನ ನಿಲ್ಲಿಸುವ ಪಾರ್ಕಿಂಗ್ ಸ್ಥಳವಾಗಿದೆ ಮಾರ್ಪಟ್ಟಿದೆ ಇಷ್ಟಾದರೂ ಸಂಚಾರಿ ಪೊಲೀಸರು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಹೀಗೆ ಅನೇಕ ಸಮಸ್ಯೆ ಇದ್ದರೂ ನಗರಸಭೆ ಸೇರಿ ಸಂಬAಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚರಗೊಳ್ಳುತ್ತಿಲ್ಲ ಎಂಬುದೇ ನಗರ ಜನತೆಯ ಪ್ರಶ್ನೆಯಾಗಿದೆ. ಈ ನಿಟ್ಟಿನಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ನೇತೃತ್ವದಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಯಲಿದ್ದು, ಆ ಸಭೆಯಲ್ಲಾದರೂ ಈ ಎಲ್ಲ ಸಮಸ್ಯೆಗೆ ಪರಿಹಾರ ದೊರೆಕಿಸಿಕೊಡುವ ಪ್ರಯತ್ನ ಮಾಡುವರೇ ಕಾದು ನೋಡಬೇಕಾಗಿದೆ.