ಹಾಸನ: ಗುರುಪೂರ್ಣಿಮ ಅಂಗವಾಗಿ ನಗರದ ಸಾಲಗಾಮೆ ರಸ್ತೆ ಬಳಿ ಇರುವ ಶ್ರೀ ಶಿರಡಿ ಸಾಯಿ ಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜು.15 ರಿಂದ 21ರ ವರೆಗೂ ಪ್ರತಿ ದಿನ ಬೆಳಿಗ್ಗೆ 10 ರಿಂದ 12ರ ವರೆಗೂ ಶ್ರೀ ಸಾಯಿ ಸಚ್ಚರಿತೆ ಪಾರಾಯಣ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಶಿರಡಿ ಸಾಯಿ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಸಾಯಿ ಪ್ರಸಾದ್ ತಿಳಿಸಿದರು..
ಮಾಧ್ಯಮದೊಂದಿಗೆ ಮಾತನಾಡಿ ಅವರು, ಶ್ರೀ ಗುರುಪೂರ್ಣಿಮ ಅಂಗವಾಗಿ 8 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಜು.15ರ ಸೋಮವಾರದಂದು ಸಂಜೆ 6:30 ರಿಂದ 8:30ರ ವರೆಗೂ ಸದ್ಗುರು ಶ್ರೀ ಶಿರಡಿ ಸಾಯಿಬಾಬ ಕುರಿತು ಪ್ರವಚನವನ್ನು ಯು.ಎನ್. ನಟರಾಜು ನಡೆಸಿಕೊಡಲಿದ್ದಾರೆ. ಜು.16ರ ಮಂಗಳವಾರ ಸಂಜೆ 6:30 ರಿಂದ 8:30ರ ವರೆಗೂ ಭಕ್ತಿ ಸಂಗೀತವನ್ನು ಕುಮಾರ್ ಕಟ್ಟೆಬೆಳಗುಲಿ ಮತ್ತು ತಂಡದವರು ನಡೆಸುವರು.
ಜು.17ರ ಬುಧವಾರ ಮದ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಚಿಣ್ಣರ ಕಲಾ ಮೇಳ, ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ದೆ ಏರ್ಪಡಿಸಿದ್ದು, ಅಂದು ಸಂಜೆ 6:30 ರಿಂದ ರಾತ್ರಿ 8:30ರ ವರೆಗೂ ಮಾರುತಿ ಕಲಾ ಸಂಘದ ಮಾರನಹಳ್ಳಿಯ ಗುಂಡಯ್ಯ ಮತ್ತು ಸಂಗಡಿಗರಿಂದ ಸಂಪೂರ್ಣ ರಾಮಾಯಣ, ತೊಗಲು ಬೊಂಬೆಯಾಟ ಹಮ್ಮಿಕೊಳ್ಳಲಾಗಿದೆ. ಜು.18ರ ಗುರುವಾರ ಸಂಜೆ 6:30 ರಿಂದ 8:30ರ ವರೆಗೂ ಎಚ್.ಎನ್. ನರೇಂದ್ರ ಹಾಗೂ ಶ್ರೀವತ್ಸ ಚನ್ನಗಿರಿ ಮತ್ತು ತಂಡದವರಿಂದ ವೀಣಾ ವೇಣುವಾದನ ಜರುಗಲಿದೆ ಎಂದು ಮಾಹಿತಿ ನೀಡಿದರು.
ಜು.19ರ ಶುಕ್ರವಾರ ಸಂಜೆ 6:30 ರಿಂದ 8:30ರ ವರೆಗೂ ಪ್ರೋ. ಕೃಷ್ಣೇಗೌಡ ಇವರಿಂದ ಹಾಸ್ಯ ವಿನೋಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜು.20ರ ಶನಿವಾರ ಸಂಜೆ 6:30 ರಿಂದ 8:30ರ ವರೆಗೂ ಅನ್ಯಾಯಕಾರಿ ಬ್ರಹ್ಮ ಹಾಡಿನ ಖ್ಯಾತಿ ಡಾ॥ ಮಳವಳ್ಳಿ ಮಹಾದೇವಸ್ವಾಮಿ ಮತ್ತು ತಂಡದವರಿಂದ ಜಾನಪದ ಗೀತೆಗಳನ್ನು ಏರ್ಪಡಿಸಿದ್ದು,, ಜು.21ರ ಭಾನುವಾರ ಶ್ರೀ ಗುರುಪೂರ್ಣಿಮ ಅಂಗವಾಗಿ ಸಂಜೆ 6:30 ರಿಂದ 8:30ರ ವರೆಗೂ ಆರ್. ಗುರುರಾಜುಲು ನಾಯ್ಡ ಅವರ ಶಿಷ್ಯೆ ಹರಿಕಥಾ ವಿದುಷಿ ಡಾ॥ ಮಾಲಿನಿ ಮೈಸೂರು ಇವರಿಂದ ದತ್ತ ಚರಿತ್ರೆ ಕುರಿತು ಹರಿಕಥೆ ನಡೆಸುಕೊಡಲಿದ್ದಾರೆ. ಜು.22ರ ಕೊನೆಯ ದಿನದ ಕಾರ್ಯಕ್ರಮದಲ್ಲಿ ಬೆಳಿಗ್ಗೆ 10 ರಿಂದ 12 ಗಂಟೆಯಲ್ಲಿ ನಗರದ ಪ್ರಮುಖ ರಾಜಬೀದಿಗಳಲ್ಲಿ ಶ್ರೀ ಸಾಯಿಬಾಬಾರವರ ಉತ್ಸವ ಜರುಗಲಿದೆ.
ಶ್ರೀ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಪ್ರತಿ ಗುರುವಾರ ದೇವರಿಗೆ ವಿಶೇಷ ಪೂಜೆ ಹಾಗೂ ಬಂದ ಭಕ್ತರಿಗೆ ಪ್ರಸಾದ ರೂಪದಲ್ಲಿ ಅನ್ನದಾನವನು ನಡೆಸಿಕೊಂಡು ಬರಲಾಗತ್ತಿದೆ ಎಂದು ಹೇಳಿದರು.