ಚಿತ್ರದುರ್ಗ: ನಗರದ ವಿವಿಧೆಡೆ ಗುರುವಾರ ತಾಯಿ ಭುವನೇಶ್ವರಿ ದೇವಿ ಪೂಜೆಯೊಂದಿಗೆ ಕರ್ನಾಟಕ ರಾಜ್ಯೋತ್ಸವ, ಸಂತ ಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಆಚರಿಸುವ ಮೂಲಕ ಗೌರವ ಸಲ್ಲಿಸಲಾಯಿತು.
ಚಿನ್ಮೂಲಾದ್ರಿ: ಪತ್ರಿಕಾ ಭವನದಲ್ಲಿ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯಿಂದ ಕನ್ನಡಾಂಬೆ, ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು. ಸಹಾಯಕ ಪ್ರಾಧ್ಯಾಪಕ ಪ್ರೊ.ಬಸವರಾಜ ಟಿ.ಬೆಳಗಟ್ಟ, ವೇದಿಕೆ ಗೌರವಾಧ್ಯಕ್ಷ ಬಿ.ಕೆ.ರಹಮತ್ ಉಲ್ಲಾ, ಅಧ್ಯಕ್ಷ ಡಾ.ಎಸ್.ಎಚ್.ಶಫಿವುಲ್ಲಾ, ಲೋಕೋಪಯೋಗಿ ಇಲಾಖೆಯ ಅಶೋಕ್‌ಕುಮಾರ್, ಸಾಮಾಜಿಕ ಕಾರ್ಯಕರ್ತ ಡಾ.ಎಚ್.ಎಸ್.ಕೆ. ಸ್ವಾಮಿ, ಉಪಾಧ್ಯಕ್ಷರಾದ ಶೋಭಾ ಮಲ್ಲಿಕಾರ್ಜುನ್, ಶಿವರುದ್ರಪ್ಪ ಪಂಡರಹಳ್ಳಿ ಇತರರಿದ್ದರು.
ಎಸ್‌ಜೆಎಂ ಪಾಲಿಟೆಕ್ನಿಕ್: ನಗರದ ಎಸ್‌ಜೆಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕನಕದಾಸರ ಜಯಂತ್ಯುತ್ಸವ ಆಚರಿಸಲಾಯಿತು. ಗ್ರಂಥಪಾಲಕ ಎಂ.ವೀರಯ್ಯ, ಮೆಕಾನಿಕಲ್ ವಿಭಾಗದ ಸೋಮಶೇಖರಪ್ಪ ಮಾಶ್ಯಾಳ್, ಈ.ಗೋಪಿನಾಥ್, ಅಧೀಕ್ಷಕ ಸಿ.ಎನ್.ಮೋಹನ್ ಇತರರಿದ್ದರು.
ಎಸ್‌ಜೆಎಂ ಮಹಿಳಾ ಕಾಲೇಜು: ಕಾಲೇಜಿನಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು. ಐಕ್ಯುಎಸಿ ಸಂಚಾಲಕ ಪ್ರೊ.ಪರಮೇಶ್ವರ, ಎನ್‌ಎಸ್‌ಎಸ್ ಅಧಿಕಾರಿಗಳಾದ ಜಿ.ಎಸ್.ನಾಗರಾಜ, ಎನ್.ಎಲ್.ರಾಜಾನಾಯ್ಕ, ಶಿವಕುಮಾರ್, ಶ್ರೀನಿವಾಸ್, ಲೋಕೇಶ್, ಕುಮಾರ್, ರುದ್ರಪ್ಪ, ವಸಂತಕುಮಾರಿ, ರಾಘವೇಂದ್ರ ಇತರರಿದ್ದರು.
ಸೊಂಡೇಕೆರೆ: ಹಿರಿಯೂರು ತಾಲೂಕಿನ ಸೊಂಡೇಕೆರೆ ಗ್ರಾಮದ ಸದ್ಗುರು ಗ್ರಾಮಾಂತರ ಕಾನ್ವೆಂಟ್ ಶಾಲೆಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮಕ್ಕಳಿಗೆ ಸಿಹಿ ಹಂಚಿ ಜಯಂತ್ಯುತ್ಸವ ಆಚರಿಸಲಾಯಿತು. ಕಾರ್ಯದರ್ಶಿ ಎಸ್.ಟಿ.ಮಂಜುನಾಥ್, ಮುಖ್ಯಶಿಕ್ಷಕಿ ಕೆ.ಉಮಾದೇವಿ, ಜಿ.ತಿಪ್ಪೇಸ್ವಾಮಿ, ಎಸ್.ಶಶಿಕಲಾ, ಲಕ್ಷ್ಮಿ ಇತರರಿದ್ದರು.