ಬೆಳಗಾವಿ: ನಗರದ ಹಲವೆಡೆ ಪ್ರತಿಷ್ಠಾಪಿಸಲಾಗಿರುವ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಅಂಗವಾಗಿ ಸೆ.9ರಂದು ರಾತ್ರಿ, ಸೆ.10ರ ಬೆಳಗಿನ ಜಾವದವರೆಗೆ ನಗರದಲ್ಲಿ ಬೃಹತ್ ಮೆರವಣಿಗೆ ನಡೆಯಲಿದೆ.
ನಗರದಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳ ಮೆರವಣಿಗೆಯು ನರಗುಂದಕರ ಭಾವೆ ಚೌಕ್‌ದಿಂದ ಪ್ರಾರಂಭವಾಗಿ ಮಾರುತಿ ಗಲ್ಲಿ, ಹುತಾತ್ಮ ಚೌಕ್, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಯಂಡೆಖೂಟ, ಕಾಲೇಜ್ ರಸ್ತೆ, ಧರ್ಮವೀರ ಸಂಭಾಜಿ ಚೌಕ್ (ಬೋಗಾರವೇಸ್), ರಾಮಲಿಂಗಖಿಂಡ ಗಲ್ಲಿ ರಸ್ತೆ, ಟಿಳಕಚೌಕ, ಹೇಮುಕಾಲನಿ ಚೌಕ್ (ಶಿವಭವನ), ಶನಿ ಮಂದಿರ, ಕಪಿಲೇಶ್ವರ ಓವರ್ ಬ್ರಿಜ್ ಮೂಲಕ ಕಪಿಲೇಶ್ವರ ಮಂದಿರದ ಬಳಿ ಮುಕ್ತಾಯಗೊಳ್ಳಲಿದೆ.
ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ನಗರದ ಪ್ರಮುಖ ಮಾರ್ಗಗಳ ಸಂಚಾರ ಬದಲಿಸಲಾಗಿದ್ದು, ಸಾರ್ವಜನಿಕರು ನಿಯಮ ಪಾಲಿಸಬೇಕು ಎಂದು ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.
ಅಶೋಕ ಪಿಲ್ಲರ್ ವೃತ್ತ-ಆರ್‌ಟಿಓ-ಚನ್ನಮ್ಮ ಸರ್ಕಲ್ ಮಾರ್ಗವಾಗಿ ಕಾಲೇಜ್ ರಸ್ತೆ ಮುಖಾಂತರ ಖಾನಾಪುರ ಕಡಗೆ ಸಾಗುವ ಎಲ್ಲ ಮಾದರಿಯ ವಾಹನಗಳ ಚಾಲಕ/ಸವಾರರು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹಳೆ ಪಿಬಿ ರಸ್ತೆ ಮಾರ್ಗವಾಗಿ ಕೃಷ್ಣದೇವರಾಯ (ಕೊಲ್ಲಾಪುರ) ವೃತ್ತ, ವಾಯಾ- ಜಂಕ್ಷನ್, ಸದಾಶಿವ ನಗರ ಲಕ್ಷ್ಮೀ ಕಾಂಪ್ಲೆಕ್ಸ್, ವಿಶ್ವೇಶ್ವರಯ್ಯ ನಗರ ಬಾಚಿ ಕ್ರಾಸ್, ಗಾಂಧಿ ಸರ್ಕಲ್ (ಅರಗನ ತಲಾಬ), ಶೌರ್ಯ ಚೌಕ್ (ಮಿಲ್ಟ್ರಿ ಆಸ್ಪತ್ರೆ ಸರ್ಕಲ್), ಕೇಂದ್ರಿಯ ವಿದ್ಯಾಲಯ ನಂ.2, ಶರ್ಕತ್ ಪಾರ್ಕ್, ಗ್ಲೋಬ್ ಥಿಯೇಟರ್ ಸರ್ಕಲ್ ಮೂಲಕ ಖಾನಾಪುರ ರಸ್ತೆಗೆ ಸೇರಿ ಮುಂದೆ ಸಾಗುವುದು.
ಖಾನಾಪುರ ಕಡೆಯಿಂದ ನಗರ ಭಾಗದಿಂದ ರಾಷ್ಟ್ರೀಯ ಹೆದ್ದಾರಿಗೆ ಸಾಗುವ ಮತ್ತು ಗೋಗಟೆ ಸರ್ಕಲ್ ಕಡೆಯಿಂದ ರೈಲ್ವೆ ಸ್ಟೇಶನ್, ಸ್ಟೇಶನ್ ರಸ್ತೆ, ಹೆಡ್ ಪೋಸ್ಟ್ ಆಫೀಸ್ ಸರ್ಕಲ್ ಮೂಲಕ ಶನಿ ಮಂದಿರ ಕಡೆಗೆ ಸಂಚರಿಸುವ ಎಲ್ಲ ಗ್ಲೋಬ್ ಥಿಯೇಟರ್ ಸರ್ಕಲ್‌ದಲ್ಲಿ ಎಡ ತಿರುವ ಪಡೆದುಕೊಂಡು ಶರ್ಕತ್ ಪಾರ್ಕ್ ಕೇಂದ್ರಿಯ ವಿದ್ಯಾಲಯ ನಂ.2, ಶೌರ್ಯ ಚೌಕ್ (ಮಿಲ್ಟ್ರಿ ಆಸ್ಪತ್ರೆ ಸರ್ಕಲ್), ಗಾಂಧಿ ಸರ್ಕಲ್ (ಅರಗನ ತಲಾಬ), ಎಡ ತಿರುವ ಪಡೆದುಕೊಂಡು ಗಣೇಶ ಮಂದಿರ ಹಿಂಡಲಗಾ ರಸ್ತೆ, ಡಬಲ್ ರೋಡ್ ಮೂಲಕ ಬಾಕ್ಸೈಟ್ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿ ಸೇರುವುದು.
ಜೀಜಾಮಾತಾ ಸರ್ಕಲ್ ದಿಂದ ದೇಶಪಾಂಡೆ ಪೆಟ್ರೋಲ್ ಪಂಪ್, ನರಗುಂದಕರ ಭಾವೆ ಚೌಕ್/ಕಂಬಳಿ ಖೂಟ, ಪಿಂಪಳ ಕಟ್ಟಾ, ಪಾಟೀಲ ಗಲ್ಲಿ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳನ್ನು ಜೀಜಾ ಮಾತಾ ಸರ್ಕಲ್‌ದಿಂದ ನೇರವಾಗಿ ಸೆಂಟ್ರಲ್ ಬಸ್ ಸ್ಟ್ಯಾಂಡ್ ಅಥವಾ ಪ್ಯಾಟ್ಸನ್ ಶೋರೂಂ ಕಡೆ ಹಳೆಯ ಪಿಬಿ ರಸ್ತೆಯ ಮೂಲಕ ಸಂಚರಿಸುವುದು.
ನಾಥ ಪೈ ಸರ್ಕಲ್ ಕಡೆಯಿಂದ ಬ್ಯಾಂಕ್ ಆಫ್ ಇಂಡಿಯಾ ಎಸ್‌ಪಿಎಂ ರಸ್ತೆ ಮಾರ್ಗವಾಗಿ ಕಪಿಲೇಶ್ವರ ರೈಲ್ವೆ ಓವರ್ ಬ್ರಿಡ್ಜ್ ಮುಖಾಂತರ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಬ್ಯಾಂಕ್ ಆಫ್ ಇಂಡಿಯಾ ವೃತ್ತದಲ್ಲಿ ಬಲ ತಿರುವು ಪಡೆದುಕೊಂಡು ಹಳೆ ಪಿಬಿ ರಸ್ತೆಗೆ ಸಾಗುವುದು.
ಹಳೆಯ ಪಿಬಿ ರಸ್ತೆ, ವಿಆರ್‌ಎಲ್ ಲಾಜಿಸ್ಟಿಕ್, ಭಾತಕಾಂಡೆ ಸ್ಕೂಲ್ ಮಾರ್ಗವಾಗಿ ಕಪಿಲೇಶ್ವರ ರೈಲ್ವೆ ಓವರ್ ಬ್ರಿಡ್ಜ್ ಮುಖಾಂತರ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಸಂಭಾಜಿ ರಸ್ತೆ ಬಳಸಿಕೊಂಡು ಬಸವೇಶ್ವರ ವೃತ್ತ ಖಾಸಬಾಗ, ನಾಥಪೈ ಸರ್ಕಲ್ ಮೂಲಕ ಸಂಚರಿಸುವುದು. ಹಳೆಯ ಪಿಬಿ ರಸ್ತೆ, ಯಶ ಆಸ್ಪತ್ರೆ, ಮಹಾದ್ವಾರ ರಸ್ತೆ, ಕಪಿಲೇಶ್ವರ ಮಂದಿರ ಮೂಲಕ ರೈಲ್ವೆ ಅಂಡರ್ ಬ್ರಿಡ್ಜ್ ಕಡೆಗೆ ಸಾಗುವ ಎಲ್ಲ ಮಾದರಿಯ ವಾಹನಗಳು ಯಶ್ ಆಸ್ಪತ್ರೆ ಹತ್ತಿರ ಎಡ/ಬಲ ತಿರುವು ಪಡೆದುಕೊಂಡು ಭಾತಕಾಂಡೆ ಸ್ಕೂಲ್/ತಾನಾಜಿ ಗಲ್ಲಿ ರೈಲ್ವೆ ಗೇಟ್ ಮೂಲಕ ಮುಂದೆ ಸಾಗುವುದು. ಗೂಡ್ಸ್ ಶೆಡ್ ರಸ್ತೆ ಮೂಲಕ ಕಪಿಲೇಶ್ವರ ಓವರ್ ಬ್ರಿಡ್ಜ್ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಎಸ್‌ಪಿಎಂ ರಸ್ತೆ ಕಡೆಗೆ ಸಂಚರಿಸದೇ ಮರಾಠ ಮಂದಿರ ಗೋವಾ ವೇಸ್ ಸರ್ಕಲ್ ಕಡೆಗೆ ಸಂಚರಿಸುವುದು.
ವಾಹನ ನಿಲುಗಡೆ ನಿಷೇಧ: ಮೆರವಣಿಗೆ ಮಾರ್ಗದಲ್ಲಿ ಎರಡು ಕ್ಯಾರೇಜ್ ವೇ ಇದ್ದ ಕಡೆ ಒಂದು ಮಾರ್ಗವನ್ನು ಹಾಗೂ ಒಂದು ಕ್ಯಾರೇಜ್ ವೇ ಇದ್ದ ರಸ್ತೆಯನ್ನು ಸಂಪೂರ್ಣವಾಗಿ ಮೆರವಣಿಗೆಗೆ ಉಪಯೋಗಿಸಲಾಗುತ್ತಿದೆ.
ಚನ್ನಮ್ಮ ವೃತ್ತದಿಂದ ಮುಖ್ಯ ಮೆರವಣಿಗೆ ಸೇರುವ ಮಾರ್ಗ ಚನ್ನಮ್ಮ ವೃತ್ತದಿಂದ ಶನಿವಾರ ಖೂಟವರೆಗಿನ ಕಾಕತಿವೇಸ್ ರಸ್ತೆ, ಶನಿವಾರ ಖೂಟದಿಂದ ಕಂಬಳಿ ಖೂಟವರೆಗಿನ ಗಣಪತಿ ಗಲ್ಲಿ ರಸ್ತೆ ಹಾಗೂ ಮೆರವಣೆಗೆ ಸಾಗುವ ಮಾರ್ಗವಾದ ನರಗುಂದಕರ ಭಾವೆ ಚೌಕ, ಮಾರುತಿ ಗಲ್ಲಿ, ಹುತಾತ್ಮ ಚೌಕ್, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಕಾಲೇಜ ರಸ್ತೆ, ಧರ್ಮವೀರ ಸಂಭಾಜಿ ಚೌಕ್, ರಾಮಲಿಂಗಖಿಂಡಿ ಗಲ್ಲಿ ರಸ್ತೆ, ಟಿಳಕಚೌಕ್, ಹೇಮುಕಾಲನಿ ಚೌಕ್, ಶನಿಮಂದಿರ, ಕಪಿಲೇಶ್ವರ ಓವರ್ ಬ್ರಿಜ್, ಕಪಿಲೇಶ್ವರ ಮಂದಿರದ ಎರಡೂ ಬದಿಯ ರಸ್ತೆಗಳಲ್ಲಿ ಮತ್ತು ಕ್ಯಾಂಪ್ ಪ್ರದೇಶ ವ್ಯಾಪ್ತಿಯ ಹ್ಯಾವಲಾಕ್ ರಸ್ತೆ, ಕ್ಯಾಟಲ್ ರೋಡ್, ಯಂಡೇಖೂಟ ದಿಂದ ದೇಶಪಾಂಡೆ ಖೂಟವರೆಗಿನ ಹಾಗೂ ಪವನ ಹೋಟೆಲ್ ವರೆಗಿನ ರಸ್ತೆಗಳಲ್ಲಿ ಸೆ.ರಂದು ಮಧ್ಯಾಹ್ನ 2ರಿಂದ ಸೆ.10ರಂದು ಮೆರವಣಿಗೆ ಮುಕ್ತಾಯದವರೆಗೆ ಎಲ್ಲ ಮಾದರಿಯ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.
ಸಾರ್ವಜನಿಕರ ವಾಹನಗಳ ನಿಲುಗಡೆಗಾಗಿ ಗುರುತಿಸಿದ ಸ್ಥಳಗಳ ವಿವರ
ಬೆನನ್‌ಸ್ಮಿತ್ ಕಾಲೇಜ್ ಮೈದಾನ, ಬೋಗಾರವೇಸ್ ಸರ್ಕಲ್‌ದಿಂದ ದೇಶಪಾಂಡೆ ಖೂಟ ಕಡೆಗೆ ಸಾಗಿದ ವನಿತಾ ವಿದ್ಯಾಲಯ ಮುಂದಿನ ಬೋಳ ರಸ್ತೆ.
ಧರ್ಮವೀರ ಸಂಭಾಜಿ (ಬೋಗಾರವೇಸ್) ಸರ್ಕಲ್ ಹತ್ತಿರದ ಲಿಂಗರಾಜ ಪಾಟೀಲ ರವರ ಖುಲ್ಲಾ ಜಾಗ.
ಫಿಶ್ ಮಾರ್ಕೆಟ್‌ದಿಂದ ಇಸ್ಲಾಮಿಯಾ ಸ್ಕೂಲ್ ಕಡೆಗೆ ಸಾಗಿದ ರಸ್ತೆಯ ಒಂದು ಬದಿಗೆ.
ಮರಾಠ ವಿದ್ಯಾನಿಕೇತನ ಮೈದಾನ ಬನ್ನಿ ಮಂಟಪ.
ದೇಶಪಾಂಡೆ ಖೂಟದಿಂದ ಗಾಂಧಿ ಸರ್ಕಲ್ ಅರಗನ ತಲಾಬ ವರೆಗಿನ ರಸ್ತೆಯ ಒಂದು ಬದಿಗೆ.
ಖಂಜರಗಲ್ಲಿ ಪಾರ್ಕಿಂಗ್. ಮಹಾದ್ವಾರ ರಸ್ತೆಯ ಸಂಭಾಜಿ ಉದ್ಯಾನ.