ಹಾಸನ: ಹೊಸ ಹೊಸ ವಿಷಯ ತಿಳಿಯಲು ಹಾಗೂ ಹೆಚ್ಚಿನ ಜ್ಞಾನ ಸಂಪಾದಿಸಲು ಇಂತಹ ವಿಚಾರ ಮಂಥನ ಕಾರ್ಯಕ್ರಮಗಳು ಉಪಯುಕ್ತವಾಗಿದೆ ಎಂದು ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಎ.ಜೆ. ಕೃಷ್ಣಯ್ಯ ಅಭಿಪ್ರಾಯಪಟ್ಟರು.
ನಗರದ ಸಾಲಗಾಮೆ ರಸ್ತೆಯಲ್ಲಿರುವ ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಐಯುಸಿಇಇ ಈಡಬ್ಲ್ಯೂಬಿ ಎಂಸಿಇ ಸ್ಟೂಡೆಂಟ್ಸ್ ಚಾಪಿಟರ್ ಇವರ ನೇತೃತ್ವದಲ್ಲಿ ಎರಡು ದಿನದ ರಾಷ್ಟ್ರಮಟ್ಟದ ಅವಿಷ್ಕಾರ ಮಂಥನ್ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಅವರರಿಗೆ ಪರಿಣತರ ಮಾರ್ಗದರ್ಶನದಿಂದ ಉನ್ನತ ವ್ಯಾಸಂಗ ಹಾಗೂ ಉದ್ಯೋಗಕ್ಕೆ ಹೆಚ್ಚಿನ ಪ್ರಯೋಜನ ಪಡೆಯಬಹುದು ಎಂದು ಹೇಳಿದರು.
ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರು ಕಾರ್ಯಕ್ರಮದ ಆಯೋಜಕ ಡಾ. ಎಸ್. ಎಜಿಲ್ ವಣ್ಣನ್ ಮಾತನಾಡಿ, ಅವಿಷ್ಕಾರ್ ಮಂಥನ್ ಎಂಬ ಕಾರ್ಯಕ್ರಮವನ್ನು ನುರಿತ ಅನುಭವಿ ತಜ್ಜರಿಂದ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ. ಇಂದು ತಂತ್ರಜ್ಞಾನದ ಯುಗದಲ್ಲಿ ಹೆಚ್ಚು ವಿಚಾರಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಲು ಅಗತ್ಯತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಹೆಚ್.ಎಸ್.ನರಸಿಂಹನ್, ಕಾಸ್ಟ್ ಅಕೌಂಟ್ ಕಾರ್ಯದರ್ಶಿ ಲೂಬ್ ಎನ್. ರವಿಂದ್ರನಾಥ್ ಕೌಶಿಕ್, ಕರ್ನಾಟಕ ಮತ್ತು ಫೌಂಡರ್ ಅಂಡ್ ಸಿಇಒ ಎಚ್. ಸುಂದರ್ ಮೂರ್ತಿ ಮಧುಸೂದನ್, ಕಾಲೇಜಿನ ಪ್ರಾಧ್ಯಾಪಕರು ಹಾಗೂ ಎನ್.ಎಸ್.ಎಸ್. ಅಧಿಕಾರಿ ವಿಜಯ್ ಕುಮಾರ್ ತಿಲೆ, ಎ.ಐ.ಎಂ.ಎಲ್. ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕ ಬಾಲಾಜಿ ಪ್ರಬು ಇತರರು ಇದ್ದರು.