ನಗರಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನಗರಕೆರೆ ಸಂದೀಪ್ (ಶಿವಚರಣ್) ಅವಿರೋಧವಾಗಿ ಆಯ್ಕೆಯಾದರು. ಸರೋಜಮ್ಮ, ವಿಷಕಂಠಯ್ಯ, ಲಿಂಗರಾಜು, ನಂದೀಶ್, ರತ್ನಮ್ಮ, ಶಿವರಾಮಯ್ಯ, ಮರಿಈರಯ್ಯ, ಜವರಾಯಿಗೌಡ ಇದ್ದರು.  
ಜಿಲ್ಲೆ

ನಗರಕೆರೆ ಹಾಲು ಉತ್ಪಾದಕರ ಸಕಹಾರ ಸಂಘಕ್ಕೆ ಅವಿರೋಧ ಆಯ್ಕೆ

ಮದ್ದೂರು: ತಾಲೂಕಿನ ನಗರಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನಗರಕೆರೆ ಸಂದೀಪ್ (ಶಿವಚರಣ್) ಅವಿರೋಧವಾಗಿ ಆಯ್ಕೆಯಾದರು.

ಪುಟ್ಟರಾಮು ಅವರು ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಸಂಘದ ಸಭಾಂಗಣದಲ್ಲಿ ಶನಿವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಸಂದೀಪ್ ಹೊರತು ಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಪಾರ್ವತಮ್ಮ ಅವಿರೋಧ ಆಯ್ಕೆ ಘೋಷಿಸಿದರು.

ಅಧ್ಯಕ್ಷ ಸಂದೀಪ್ ಮಾತನಾಡಿ, ಸಂಘದ ಎಲ್ಲ ನಿರ್ದೇಶಕರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡಲಾಗುವುದು. ಅಲ್ಲದೆ ಸರ್ಕಾರದಿಂದ ಹಾಲು ಉತ್ಪಾದಕರಿಗೆ ಸಿಗುವ ಸವಲತ್ತುಗಳನ್ನು ಸಮರ್ಪಕವಾಗಿ ಸಿಗುವಂತೆ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಘದ ಉಪಾಧ್ಯಕ್ಷೆ ಸರೋಜಮ್ಮ, ನಿರ್ದೇಶಕರಾದ ವಿಷಕಂಠಯ್ಯ, ಲಿಂಗರಾಜು, ನಂದೀಶ್, ರತ್ನಮ್ಮ, ಶಿವರಾಮಯ್ಯ, ಮರಿಈರಯ್ಯ, ಸಂಘದ ಕಾರ್ಯದರ್ಶಿ ಜವರಾಯಿಗೌಡ, ಮುಖಂಡರಾದ ಶಿವಾನಂದ್, ಜಯರಾಮು, ನಾಗರಾಜು, ಲಿಂಗೇಗೌಡ, ರಾಜಣ್ಣ, ಕುಳ್ಳಯ್ಯ ಇದ್ದರು.