ಮದ್ದೂರು: ತಾಲೂಕಿನ ನಗರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ವಿ.ಎನ್.ಗಿರೀಶ್ ಅವಿರೋಧ ಆಯ್ಕೆಯಾದರು.
ಶಿಲ್ಪಾ ಜಯಲಿಂಗು ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ವಿ.ಎನ್.ಗಿರೀಶ್ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯೂ ಆದ ತಾಪಂ ಇಒ ರಾಮಲಿಂಗಯ್ಯ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷ ವಿ.ಎನ್.ಗಿರೀಶ್ ಸದಸ್ಯರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸದಸ್ಯರ ಹಾಗೂ ಅಧಿಕಾರಿಗಳ ವಿಶ್ವಾಸಕ್ಕೆ ಪಡೆದು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಸರ್ಕಾರದಿಂದ ಬರುವ ಎಲ್ಲ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಅನುಕೂಲ ಕಲ್ಪಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಪಂ ಉಪಾಧ್ಯಕ್ಷೆ ಜಯ ರತ್ನಮ್ಮ, ಸದಸ್ಯರಾದ ಎನ್.ಡಿ.ಶಿವಚರಣ್, ಚಂದ್ರಕಲಾ, ಎ.ಟಿ.ಉಮಾ, ಗೌರಮ್ಮ, ಎನ್.ಅರ್.ಶಿಲ್ಪಾ, ಯು.ಆರ್.ಶ್ವೇತಾ, ಯು.ಆರ್.ಮಹದೇವ, ಯು.ಎಸ್.ಗಿರೀಶ್, ಜಿ.ಆರ್.ಅನಿತಾ, ಬಿ.ಸಿ.ಲಕ್ಷ್ಮೀ, ಸುಮಿತ್ರಾ, ಚಂದ್ರಬಾಯಿ, ರುದ್ರಯ್ಯ, ಮಲ್ಲೇಶ್‌ಗೌಡ, ಕಿರಣ್‌ಕುಮಾರ್, ಸುರೇಶ್, ಮುಖಂಡರಾದ ಶಂಕರಯ್ಯ, ಲಿಂಗರಾಜು, ರಾಜಣ್ಣ, ಸುಂದರೇಶ್, ಉಮಾಶಂಕರ್, ಗೋವಿಂದು, ಕಾಂತರಾಜು, ಜಯಕುಮಾರ್ ಇದ್ದರು.