ಕಲಬುರಗಿ: ವಿಶ್ವಮಧ್ವ ಮಹಾಪರಿಷತ್ ಅಂಗಸAಸ್ಥೆಯಾದ ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯ ೨೭೯ನೇ ನಗರ ಸಂಕೀರ್ತನೆ ಅ.೨೮ರಂದು ಸಂಜೆ ೪.೩೦ಕ್ಕೆ ರಾಘವೇಂದ್ರ ಕಾಲನಿ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಶ್ರೀಗೌರಿ ಭಜನಾ ಮಂಡಳಿ ಸದಸ್ಯೆಯರಿಂದ ಲಕ್ಷಿö್ಮÃ ಶೋಭಾನ ಮತ್ತು ಹರಿಕಥಾಮೃತಸಾರದ ಸಾಮೂಹಿಕ ಪಾರಾಯಣ ನಡೆಯಲಿದೆ. ಪ್ರಚಾರ ವಾಹಿನಿ ಅಧ್ಯಕ್ಷ ಪಂ.ಗೋಪಾಲಾಚಾರ್ಯ ಅಕಮಂಚಿ ಉಪನ್ಯಾಸ ನೀಡುವರು. ದೇವಸ್ಥಾನ ಟ್ರಸ್ಟ್ ಖಜಾಂಚಿ ಮೋಹನರಾವ ಕುಲಕರ್ಣಿ, ಚಿಮ್ಮನಚೂಡ್ ಮುಖ್ಯ ಅತಿಥಿಯಾಗಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ವಾಹಿನಿ ಸಂಚಾಲಕ ಭೆಂಕಿ ಭೀಮಭಟ್ ತಿಳಿಸಿದ್ದಾರೆ. ಮಂತ್ರಾಲಯದ ಶ್ರೀಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ಮತ್ತು ಶ್ರೀ ಸುಭುದೇಂದ್ರತೀರ್ಥ ಶ್ರೀಪಾದಂಗಳವರ ನೇತೃತ್ವದಲ್ಲಿ ನ.೬, ೭ರಂದು ನಡೆಯಲಿರುವ ತಿರುಪತಿ ಮೆಟ್ಟಿಲೋತ್ಸವಕ್ಕೆ ಕಲಬುರಗಿಯ ಶ್ರೀವೆಂಕಟೇಶ, ಶ್ರೀಲಕ್ಷಿö್ಮÃ ಸತ್ಯನಾರಾಯಣ ಮತ್ತು ಶ್ರೀ ವಿಷ್ಣುಪ್ರಿಯ ಭಜನಾ ಮಂಡಳಿಗಳು ಆಯ್ಕೆಯಾಗಿವೆ ಎಂದು ತಿಳಿಸಿದ್ದಾರೆ.