ಚಿಕ್ಕಮಗಳೂರಿನ ನಗರ ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ಗ್ರಂಥಾಲಯ ಸಂಸ್ಥಾಪಕ ಎಸ್.ಆರ್.ರಂಗನಾಥ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು.  
ಜಿಲ್ಲೆ

ನಗರ ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ

ಚಿಕ್ಕಮಗಳೂರು: ನಗರ ಕೇಂದ್ರ ಗ್ರಂಥಾಲಯದಲ್ಲಿ ಮಂಗಳವಾರ ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ಗ್ರಂಥಾಲಯ ಸಂಸ್ಥಾಪಕ ಎಸ್.ಆರ್.ರಂಗನಾಥ್ ಅವರ ಭಾವಚಿತ್ರ ಹಾಗೂ ಪುಸ್ತಕಗಳಿಗೆ ಗ್ರಂಥಾಲಯ ಸಿಬ್ಬಂದಿ ವಿಶೇಷ ಪೂಜೆ ಸಲ್ಲಿಸಿ ಗ್ರಂಥಪಾಲಕರ ದಿನಾಚರಣೆ ಆಚರಿಸಿದರು.

ಈ ವೇಳೆ ಗ್ರಂಥಾಪಾಲಕ ಬಿ.ಎಂ.ಸಿದ್ದಪ್ಪ ಮಾತನಾಡಿ, ಓದುಗ ಬಂಧುಗಳು, ಸಾರ್ವಜನಿಕರಿಗೆ ಅನುಕೂಲವಾಗಲು ಗ್ರಂಥಾಲಯದಲ್ಲಿ ಹಲವಾರು ಪುಸ್ತಕಗಳನ್ನು ಇರಿಸಲಾಗಿದೆ. ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ ಎಂದರು.

ಇAದಿನ ಗ್ರಂಥಾಪಾಲಕರ ದಿನಾಚರಣೆಯಲ್ಲಿ ರಾಮಾಯಣ ದರ್ಶನಂ, ಬಸವಣ್ಣ, ಅಂಬೇಡ್ಕರ್, ಮಹಾಭಾರತ, ಜಾನಪದ, ಪಂಪ, ಸರ್ವಜ್ಞ ಹಾಗೂ ಕಿತ್ತೂರು ಠಾಣೆ ಚೆನ್ನಮ್ಮ ಜೀವನ ಚರಿತ್ರೆ ವಿಶೇಷ ಪುಸ್ತ ಕಗಳನ್ನು ಇರಿಸಿ ಪೂಜೆ ಸಲ್ಲಿಸಲಾಯಿತು.