ಕೆಂಭಾವಿ : ನಗನೂರ ಗ್ರಾಮ ಪಂಚಾಯಿತಿ ೧೯ ಸದಸ್ಯರು ಕಾಂಗ್ರೆಸ್ ಬೆಂಬಲಿತರಿದ್ದರೂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕಾಗಿ ಎರಡು ಬಣಗಳಾಗಿ ಮಾರ್ಪಟ್ಟಿದ್ದವು. ಎರಡೂ ಬಣದವರು ನಾಮಪತ್ರ ಸಲ್ಲಿಸಿದ್ದರಿಂದ ಮತದಾನ ಮೂಲಕ ಚುನಾವಣೆ ಪ್ರಕ್ರಿಯೆ ನಡೆಸಲಾಯತು. ಎರಡೂ ಸ್ಥಾನಗಳ ಇಬ್ಬರಿಗೂ ತಲಾ ೯ ಮತ ಬಿದ್ದರೆ, ಒಂದು ಅಸಿಂಧುವಾಯಿತು. ಆಗ ಚುನಾವಣಾಧಿಕಾರಿ ಗುರುನಾಥ ಲಾಟರಿ ಮೂಲಕ ಆಯ್ಕೆಗೆ ಮುಂದಾದರು. ಈ ಪ್ರಕ್ರಿಯೆಯಲ್ಲಿ ಶಿವಶರಣರೆಡ್ಡಿ ಕೆಂಚಗೋಳಗೆ ಅಧ್ಯಕ್ಷ ಹಾಗೂ ಯಮನವ್ವ ಮಲ್ಲಪ್ಪಗೆ ಉಪಾಧ್ಯಕ್ಷೆಯಾಗುವ ಅದೃಷ್ಟ ಒಲಿಯಿತು. ಪಿಡಿಒ ಶ್ರೀಶೈಲ್ ಹಳ್ಳಿ ಇದ್ದರು.
ಚುನಾವಣೆ ಬಳಿಕ ನಗನೂರ-ಚಾಮನಾಳ ಮುಖ್ಯ ರಸ್ತೆಯಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಂದು ಬಣ ಮತ್ತೊಮ್ಮೆ ಚುನಾವಣೆ ಮಾಡುವಂತೆ ಪಟ್ಟು ಹಿಡಿದು ಗ್ರಾಪಂ ಕಚೇರಿಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಚದುರಿಸಿದರು. ನಂತರ ಪೊಲೀಸ್ ಅಧಿಕಾರಿಗಳ ಜತೆ ವಾಗ್ವಾದಕ್ಕಿಳಿದ ಕೆಲ ಸದಸ್ಯರು ಚುನಾವಣೆ ಮುಂದೂಡುವAತೆ ಪಟ್ಟು ಹಿಡಿದರಾದರೂ ಎಲ್ಲರನ್ನು ಸಮಾಧಾನಪಡಿಸಿದ ಸ್ಥಿತಿ ತಿಳಿಯಾಯಿತು. ಪಿಎಸ್‌ಐ ರಾಜಶೇಖರ ನಾಯಕ ಹಾಗೂ ದೇವೇಂದ್ರ ರೆಡ್ಡಿ ನೇತೃತ್ವದ ತಂಡ ಊರಲ್ಲಿ ಬಿಗಿ ಬಂದೋಬಸ್ತ್ ಒದಗಿಸಿತ್ತು.