ಜಿಲ್ಲೆ

ನಗದು, ಚಿನ್ನಾಭರಣ ಸೇರಿ 3.70 ಲಕ್ಷ ರೂ. ಕಳವು

ಹಾಸನ: ಮನೆಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು 1.70 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗು 2 ಲಕ್ಷ ರೂ. ನಗದು ಕಳವು ಮಾಡಿರುವ ಘಟನೆ ಶಾಂತಿನಗರದಲ್ಲಿ ಇತ್ತೀಚೆಗೆ ನಡೆದಿದೆ.
ನಿವಾಸಿ ಜನಾರ್ಧನ ಎಂಬುವವರ ಮನೆಯಲ್ಲಿ ಏ. 11 ರಿಂದ 12ರ ಅವಧಿಯಲ್ಲಿ ಪ್ರಕರಣ ನಡೆದಿದೆ. ಜನಾರ್ಧನ ಅವರು ಕುಟುಂಬ ಸಮೇತ ಸಂಬಂಧಿಕರ ಮನೆಗೆ ತೆರಳಿದ್ದರು. ಮಾರನೇ ದಿನ ಮನೆಗೆ ಬಂದಾಗ ಮನೆಯ ಬಾಗಿಲು ಮುರಿದು ಕಬೋರ್ಡ್ನಲ್ಲಿದ್ದ 5 ಗ್ರಾಂ ತೂಕದ ಚಿನ್ನದ ಉಂಗುರ, 15 ಗ್ರಾಂ ತೂಕದ ಚಿನ್ನದ ಸರ, 8 ಗ್ರಾಂ ತೂಕದ 2 ಜೊತೆ ಚಿನ್ನದ ಓಲೆ, 250 ಗ್ರಾಂ ತೂಕದ ಬೆಳ್ಳಿಯ ವಸ್ತು ಹಾಗು 2 ಲಕ್ಷ ರೂ. ಅಪಹರಣವಾಗಿರುವುದು ತಿಳಿದಿದೆ. ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.