ಜಿಲ್ಲೆ

ನಕ್ಷೆ ಬದಲಾವಣೆಗೆ ಲಂಚ ಪಡೆಯುವಾಗ ಸಿಕ್ಕಿಬಿದ್ದ ಎಡಿಎಲ್‌ಆರ್‌

ಅಂಕೋಲಾ: ಭೂಮಿಯ ಸರ್ವೇ ನಕ್ಷೆ ತಯಾರಿಸಲು ಲಂಚ ಪಡೆಯುತ್ತಿದ್ದ ಭೂ ದಾಖಲೆಗಳ ಇಲಾಖೆ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕ ಪುಟ್ಟಸ್ವಾಮಿ ಸಿದ್ದಯ್ಯ ಬಂಧಿತರು. ರಮೇಶ ನಾಯಕ ಬೋಳೆ ಎಂಬುವವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಎಸ್‌ಪಿ ರಾಜು ಎಸ್‌. ನೇತೃತ್ವದಲ್ಲಿ ಶುಕ್ರವಾರ ಸಾಯಂಕಾಲ ಖಾಸಗಿ ಹೋಟೆಲ್‌ನಲ್ಲಿ ದಾಳಿ ನಡೆದಿದೆ.
ರಮೇಶ ಅವರ ಬೆಳಸೆಯ ಸರ್ವೇ ನಂಬರ್‌ 140 ರ 7 ಎಕರೆ ಕ್ಷೇತ್ರದಲ್ಲಿ ಪ್ರತ್ಯೇಕ 2 ಎಕರೆ 13 ಗುಂಟೆ ನಕ್ಷೆ ತಯಾರಿಸಿಕೊಡಲು ಪಟ್ಟಸ್ವಾಮಿ 50 ಸಾವಿರ ರೂ. ಲಂಚ ಕೇಳಿದ್ದರು. ಹಣ ಕೊಡಲು ಇಷ್ಟವಿಲ್ಲದ ರಮೇಶ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.