ಜಿಲ್ಲೆ

ನಕಲಿ ಯುಡಿಐಡಿ ಕಾರ್ಡ್ಗಳನ್ನು ರದ್ದುಪಡಿಸಿ

ಹೊಸಪೇಟೆ: ಉಪ ವಿಭಾಗಿಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ಯುಡಿಐಡಿ ಕಾರ್ಡ್ ನಕಲಿ ಮಾಡಲು ಸಹಕಾರ ನೀಡಿದ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಎಂದು ವಿಜಯನಗರ ಜಿಲ್ಲಾ ವಿಕಲಚೇತನರ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಡಿ.ಶಿವಕುಮಾರ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ನಗರ ಹಾಗೂ ಹಗರಿಬೊಮ್ಮಹಳ್ಳಿಯಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ಸಾಮಾನ್ಯ ಜನರಿಗೆ ಶ್ರವಣ ದೋಷ ನಕಲಿ ಅಂಗವಿಕಲತೆ ವೈದ್ಯಕೀಯ ಪ್ರಮಾಣ ಪತ್ರ ನೀಡಲಾಗಿದೆ. ಜತೆಗೆ ನಕಲಿ ಯುಡಿಐಡಿ ಕಾರ್ಡ್ ನೀಡಲಾಗಿದೆ. ಇದು ಅತ್ಯಂತ ಅಮಾನವೀಯ ಕೃತ್ಯವಾಗಿದೆ. ಇದಕ್ಕೆ ಕಾರಣಾದ ವೈದ್ಯರು ಹಾಗೂ ಸಿಬ್ಬಂಧಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಇದು ರಾಜ್ಯಾಧ್ಯಾಂತ ಈ ಧಂದೆ ನಡೆಯುತ್ತಿದ್ದು, ರಾಜ್ಯ ಸರ್ಕಾರ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಇಂತಹ ಪ್ರಕರಣದಿಂದ ನಿಜವಾದ ಅಂಗವಿಕಲರಿಗೆ ಅನ್ಯಾಯವಾಗುತ್ತಿದೆ. ರಾಜ್ಯದಲ್ಲಿ ಹಲವು ನಕಲಿ ಕಾರ್ಡ್ಗಳಿವೆ. ಈ ವರೆಗೆ ನೀಡಿರುವ ಎಲ್ಲಾ ಯುಡಿಐಡಿ ಕಾರ್ಡ್ ಮರುಪರೀಶೀಲಿಸಿ ನಕಲಿ ವೈದ್ಯಕೀಯ ಪ್ರಮಾಣ ಪತ್ರ ರದ್ದುಗೊಳಿಸಿ ನಿಜವಾದ ಅಂಗವಿಕಲರಿಗೆ ನ್ಯಾಯಾ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಕೆ.ಜೆ.ವೆಂಕಟೇಶ್, ಎ.ಹೊನ್ನೂರೌಲಿ, ಸೈಫು, ಎ.ಶಿವಕುಮಾರ, ದೀನ್, ರಾಮಾಲಿ ಇತರರಿದ್ದರು.