ಕಲಬುರಗಿ: ಸಮಾಜದಲ್ಲಿ ಉನ್ನತ ಜಾತಿಯಲ್ಲಿದ್ದು, ಗೌರವಕ್ಕೆ ಪಾತ್ರರಾದ ವೀರಶೈವ ಲಿಂಗಾಯತದ ಜಂಗಮರು ಬೇಡ, ಬುಡ್ಗ ಜಂಗಮ ಜಾತಿಗೆ ಸೇರಿದ್ದೇವೆಂದು ಎಸ್ಸಿ ಪ್ರಮಾಣ ಪತ್ರ ಪಡೆಯುತ್ತಿರುವುದನ್ನು ಖಂಡಿಸಿ ನಗರದಲ್ಲಿ ಜು.೧೮ರಂದು ಮಧ್ಯಾಹ್ನ ೧೨ಕ್ಕೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ ಸರ‍್ಷ ಸಮಿತಿ ಸಂಚಾಲಕ ಅರ್ಜುನ ಭದ್ರೆ ತಿಳಿಸಿದರು.
ರಾಜ್ಯದಲ್ಲಿ ಲಿಂಗಾಯತ ಜಂಗಮರು ಬೇರೆ, ಬೇಡ ಜಂಗಮರು ಬೇರೆ ಎಂದು ಹೈಕರ‍್ಟ್ ತರ‍್ಪು ನೀಡಿದೆ. ಜಾತಿ ಹೆಸರು ಒಂದೇ ಇದ್ದರೂ ಪರಿಶಿಷ್ಟ ಜಾತಿಗಳ ಸೌಲಭ್ಯ ನೀಡಬಾರದು ಎಂದು ಸುಪ್ರೀಂ ಕರ‍್ಟ್ ತರ‍್ಪು ನೀಡಿದೆ. ಆದರೆ ಇತ್ತೀಚೆಗೆ ನಡೆದ ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀೆಯಲ್ಲಿ ಲಿಂಗಾಯತ ಜಂಗಮರು ಎಸ್ಸಿಯಲ್ಲಿನ ಬೇಡ ಜಂಗಮರೆಂದು ನಮೂದಿಸಿದ್ದು, ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಕಲಿ ಜಾತಿ ಪ್ರಮಾಣ ಪತ್ರ ಪಡೆದವರು, ಪತ್ರ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಡಾ.ರವೀಂದ್ರನಾಥ ವರದಿ ಆಧಾರದಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದ ೧೦೯೭ ವಿರುದ್ಧ, ಅದನ್ನು ನೀಡಿದ ತಹಸೀಲ್ದಾರ್ ವಿರುದ್ಧ ಜರುಗಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ, ಜಾಗೃತಿ ಮೂಡಿಸಲು ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಡಿಸಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಮಲ್ಲಿಕಾರ್ಜುನ ಖನ್ನಾ, ಸರ‍್ಯಕಾಂತ ಅಜಾದಪುರ ಇತರರಿದ್ದರು.