ಜಿಲ್ಲೆ

ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ ಪ್ರತಿಭಟನೆ

ನಕಲಿ ದಾಖಲೆ ಸೃಷ್ಟಿಸಿ ಹತ್ತು ಕುಂಟೆ ಸರ್ಕಾರಿ ಜಮೀನು ಕಬಳಿಕೆ ಮಾಡಿರುವ ಅರೇಹಳ್ಳಿ ಗ್ರಾ.ಪಂ ನಲ್ಲಿ ಬಿಲ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ರೂಪ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಮುಖಂಡ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕ.ದ.ಸಂ.ಸ. ಜಿಲ್ಲಾ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಸಿದ ದಲಿತ ಮುಖಂಡರು, ಬೇಲೂರು ತಾಲೂಕು ಅರೇಹಳ್ಳಿ ಗ್ರಾ.ಪಂ ಸರ್ಕಾರಿ ಸರ್ವೆ ನಂಬರ್ 13 ರಲ್ಲಿ ಸುಮಾರು ಹತ್ತು ಕುಂಟೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ. ಒತ್ತುವರಿ ಮಾಡಿರುವುದು ಒಬ್ಬ ಸರ್ಕಾರಿ ಉದ್ಯೋಗಿ. ಈ ಹಿಂದೆ ಅನೇಕ ಭಾರಿ ಸ್ಥಳೀಯ ಅಧಿಕಾರಿಗಳಿಗೆ ಈ ಅಕ್ರಮ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ರೂಪ ನಕಲಿ ದಾಖಲೆಗಳನ್ನು ಸೃಷ್ಟಿಸಿ ತನ್ನ ತಂದೆ ಸುಂದರ್ ರೈ ಹಾಗೂ ತಾಯಿ ಅಪ್ಪಿ ಎಂಬುವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಕಬಳಿಸಿದ್ದಾರೆ. ಈ ಜಾಗದಲ್ಲಿ 1986-87 ರಲ್ಲಿ ಸಾರ್ವಜನಿಕರ ಬಳಕೆಗಾಗಿ ಕೊಳವೆ ಬಾವಿ ಕೊರೆಸಲಾಗಿತ್ತು. ಈಗ ಕೊಳವೆ ಬಾವಿನ್ನು ನಾಶಪಡಿಸಿ ಅಕ್ರಮವಾಗಿ ವಾಣಿಜ್ಯ ಮಳಿಗೆ ನಿರ್ಮಿಸಿ, ರಸ್ತೆ ನೀರು ಹರಿಯಲು ಚರಂಡಿಗೂ ಸಹ ಜಾಗ ಬಿಡದೆ ಒತ್ತುವರಿ ಮಾಡಿದ್ದಾರೆ ಎಂಬುವುದು ಪ್ರತಿಭಟನಕಾರರ ಗಂಭೀರ ಆರೋಸಿದರು.
ಸಕಲೇಶಪುರ ತಾಲೂಕಿನ ದೊಡ್ಡ ಸತ್ತಗಲ್ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಸುಮಾರು 20ಕ್ಕೂ ಹೆಚ್ಚು ದಲಿದ ಸಮುದಾಯದ ಮಕ್ಕಳು ಕಲಿಕೆಯಲ್ಲಿದ್ದಾರೆ. ಆದರೆ ಈ ಅಂಗನವಾಡಿ ಕೇಂದ್ರದ ಕಟ್ಟಡವು ಯಾವ ಸಂದರ್ಭದಲ್ಲಿ ಬೇಕಾದರು ಕುಸಿದು ಪ್ರಾಣ ಹಾನಿ ಸಂಭವಿಸಬಹುವುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರದೆ ಯಾವುದೇ ಅಹಿತಕರ ಘಟನೆ ಸಂಭವಿಸುವ ಮೊದಲು ಗ್ರಾಮಕ್ಕೆ ತಕ್ಷಣಬೇಟಿ ಮಾಡಿ ಸ್ಥಳ ಪರಿಶೀಲನೆ ನಡೆಸಿ, ನಿವೇಶನ ಮಂಜೂರು ಮಾಡಿ, ನೂತನ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವೆಂಕಟೇಶ್ ಬ್ಯಾಕರವಳ್ಳಿ, ಚಂದ್ರಗುಪ್ತ ಮೌರ್ಯ ಒಕ್ಕೂಟದ ಜಿಲ್ಲಾಧ್ಯಕ್ಷ ವಿಜಯಕುಮಾರ್ ಬಾಗಿವಾಳ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಹುಳುವಾರೆ, ರಾಘವೇಂದ್ರ, ಕೀರ್ತಿರಾಜ್, ರಮೇಶ್, ಶೇಖರ್, ಕಾಂತರಾಜು, ಲಕ್ಷ್ಮಣ್ ಇತರರು ಇದ್ದರು.