ಎಸ್.ಎಂ ಜಗದೀಶ್ ನಾಯಕ 
ಜಿಲ್ಲೆ

ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾರಲು ಯತ್ನ

ಕೊಳ್ಳೇಗಾಲ; ಪಟ್ಟಣದ ನ್ಯಾಷನಲ್ ಶಾಲೆ ಸಮೀಪದ ಸರ್ವೇ ನಂಬರ್ 708 ಬಿ.ಎ.ಎರಲ್ಲಿ ನಾಯಕ ಜನಾಂಗಕ್ಕೆ ಸೇರಿದ 1.18 ಎಕರೆ ಜಾಗವಿದ್ದು, ಇಲ್ಲಿಗೆ ಅತಿಕ್ರಮವಾಗಿ ಪ್ರವೇಶಿಸಲು ಮುಂದಾದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಾಯಕ ಸಂಘದ ಅಧ್ಯಕ್ಷ ಎಸ್.ಎಂ.ಜಗದೀಶ್ ನಾಯಕ ಎಚ್ಚರಿಸಿದ್ದಾರೆ.

ಇಲ್ಲಿ ಸದ್ಯ ನಾಯಕ ಸಮುದಾಯ ಭವನ ನಿರ್ಮಾಣವಾಗುತ್ತಿದೆ. ಸಮುದಾಯಕ್ಕೆ ಸೇರಿದ ಆಸ್ತಿಯನ್ನು ಮಾರಾಟ ಮಾಡಲು ಹಾಗೂ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಕೆಲವರು ನಕಲಿ ದಾಖಲೆ ಸೃಷ್ಟಿಸುತ್ತಿರುವ ವಿಚಾರ ಗಮನಕ್ಕೆ ಬಂದಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು

ನಾಯಕ ಸಂಘದ ತಾಲೂಕು ಉಪಾಧ್ಯಕ್ಷ ಮಹದೇವ, ನಿರ್ದೇಶಕ ಯಜಮಾನ ಚಿಕ್ಕಮಾದಣ್ಣ, ಸುಂದರ್ ರಾಜ್, ಗಡಿ ಮನೆ ಯಜಮಾನ ಮೂರ್ತಿ, ಕಟ್ಟೆಮನೆ ಯಜಮಾನ ದೊಡ್ಡ ಮಾದನಾಯಕ, ನಟರಾಜು, ಕುನ್ನ ನಾಯಕ ಸುದ್ದಿಗೋಷ್ಠಿಯಲ್ಲಿದ್ದರು.