ಬಾಗಲಕೋಟೆ ನಗರದ ಪ್ರೇಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವೀರುಪಾಕ್ಷಯ್ಯ ಹಿರೇಮಠ ಮಾತನಾಡಿದರು. ಮುಖಂಡರಾದ ಹುಸೇನ ಮಾರಾ, ಬಸವರಾಜ ಗೋನಾಳ, ಪರಶುರಾಮ ಮಂಟೂರ, ಮಲ್ಲಪ್ಪ ಗಾಣಗೇರ, ಸಿದ್ದರಾಮಯ್ಯ ಮಠಪತಿ, ಅರುಣ ಕಟ್ಟಿಮನಿ ಇತರರು ಇದ್ದರು.  
ಜಿಲ್ಲೆ

ನಕಲಿ ಗೊಬ್ಬರ ತಯಾರಕರ ಮೇಲೆ ಕಾನೂನು ಕ್ರಮ ಜರುಗಿಸಿ

ಬಾಗಲಕೋಟೆ: ಜಿಲ್ಲೆಯಲ್ಲಿ ನಕಲಿ ಡಿಎಪಿ ಗೊಬ್ಬರ ಪೂರೈಕೆ ಆಗುತ್ತಿದೆ. ಅನ್ನದಾತರು ಇದರಿಂದ ರೋಸಿ ಹೋಗಿದ್ದಾರೆ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡಬಾರದು. ಕೂಡಲೇ ನಕಲಿ ಗೊಬ್ಬರ ತಯಾರಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವೀರುಪಾಕ್ಷಯ್ಯ ಹಿರೇಮಠ ಹೇಳಿದರು.

ನಗರದ ಪ್ರೇಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಚೆಗೆ ಬಾದಾಮಿ ತಾಲೂಕಿನಲ್ಲಿ ನಕಲಿ ಡಿಎಪಿ ಗೊಬ್ಬರು ರೈತರೇ ಗುರುತಿಸಿ ಆರೋಪಿಗಳನ್ನು ಹಿಡಿದುಕೊಟ್ಟಿದ್ದಾರೆ. ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃಷಿ ಇಲಾಖೆ ಅಽಕಾರಿಗಳು ಬಹಳಷ್ಟು ಎಚ್ಚರ ವಹಿಸಿ ರೈತರನ್ನು ಕಾಪಾಡಬೇಕು. ದಿನೇ ದಿನೇ ನಕಲಿ ಗೊಬ್ಬರ ಹಾವಳಿ ಹೆಚ್ಚಾಗುತ್ತಿದ್ದು, ಕಠಿಣ ಕ್ರಮ ಅಗತ್ಯವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಸಗೊಬ್ಬರ ಸಚಿವ ಪ್ರಹ್ಲಾದ ಜೋಶಿ, ಸಿಎಂ ಸಿದ್ದರಾಮಯ್ಯ, ಕೃಷಿ ಸಚಿವ ಚಲುವರಾಯ ಸ್ವಾಮಿ ಈ ಬಗ್ಗೆ ಗಮನ ಹರಿಸದೇ ಹೋದರೇ ಉಗ್ರ ಹೋರಾಟ ಅನಿವಾರ್ಯ ಆಗಲಿದೆ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಹುಸೇನ ಮಾರಾ, ಬಸವರಾಜ ಗೋನಾಳ, ಪರಶುರಾಮ ಮಂಟೂರ, ಮಲ್ಲಪ್ಪ ಗಾಣಗೇರ, ಸಿದ್ದರಾಮಯ್ಯ ಮಠಪತಿ, ಅರುಣ ಕಟ್ಟಿಮನಿ ಇತರರು ಇದ್ದರು.